Tuesday, May 21, 2024
spot_img
More

  Latest Posts

  ಸುಂಕದಕಟ್ಟೆ ಪಿಯು ಕಾಲೇಜು ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ಕಂಡೊಡೊಂಜಿ ದಿನ ಸಂಭ್ರಮ

  ಓದಿನ ಮಧ್ಯೆ ಬಿಡುವು ಮಾಡಿಕೊಂಡು ಕಾಲೇಜು ಹುಡುಗರು, ಹುಡುಗಿಯರು, ಹಳೆ ವಿದ್ಯಾರ್ಥಿಗಳು ಕಂಡೊಡೊಂಜಿ ದಿನದ ಹೆಸರಿನಲ್ಲಿ ದಿನವಿಡೀ ಕೆಸರುಗದ್ದೆಯಲ್ಲಿ ಆಡಿ, ಓಡಿ ಕೆಸರಿ
  ನಾಟದಲ್ಲಿ ಸಂಭ್ರಮಿಸಿದರು. ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿಯು ಕಾಲೇಜಿನ ಆಶ್ರಯದಲ್ಲಿ ಪೆರಾರ ಕ್ಷೇತ್ರದ ದೈವಸ್ಥಾನದ ಪಕ್ಕದ ಗದ್ದೆಯಲ್ಲಿ ಮಂಗಳವಾರ ಕಂಡೊಡೊಂಜಿ ದಿನ ಜರುಗಿತು. ಸ್ಫೂರ್ತಿಯ ಚಿಲುಮೆಗಳಂತೆ ಓಡಿ.. ಆಡಿ.. ಸಂಭ್ರಮಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ನವೀನ್ ಕುಮಾರ್ ಆಟೋಟ ಸ್ಪರ್ಧೆ ಗಳನ್ನು ಸಂಯೋಜಿಸಿದರು.

  ಕಂಡೊಡೊಂಜಿ ದಿನದಲ್ಲಿ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಎಲ್ಲರೂ ಉಪಾಹಾರವಾಗಿ ಸವಿದ ಮಧ್ಯಾಹ್ನದ ಗಂಜಿಯೂಟಕ್ಕೆ ಕುಡುತ ಚಟಿ, ಉಪಡಚರ್ ಪಲ, ಉಪಿನ ಕಾಯಿ ಹಾಗೂ ಹೆಸು ಗಂಜಿಯೂರು, ಕುಮಾರ್‌ ಬೇಳೆ ಪಾಯಸ ಇತ್ತು. ಕಾಲೇಜಿನವರ ಆಶಯಕ್ಕೆ ಜವನೆರ್ ಪೆರಾರ ಇತರ ಸ್ಥಳೀಯ ಸಂಘಟನೆಗಳ ಸಹಕಾರವೂ ಇತ್ತು.

  ಕಾಲೇಜಿನ ಪ್ರಿನ್ಸಿಪಾಲ್ ಸುಧಾಕರ ಶೆಟ್ಟಿ ಅವರ ನೇತೃತ್ವದಲ್ಲಿ ಸಂಯೋಜನೆಗೊಂಡ ಕಾರ್ಯಕ್ರಮವನ್ನು ಪಡುಪೆರಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮಿತಾ ಶೆಟ್ಟಿ ಉದ್ಘಾಟಿಸಿದರು. ಎಸ್‌ಎನ್ಎಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಧ್ರುವ ನಾರಾಯಣ, ಟ್ರಸ್ಟಿ ದೀಪಕ್ ಕೋಟ್ಯಾನ್, ಪದ್ಮನಾಭ ಪೂಜಾರಿ, ಯಾದವ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
  ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾ ರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಹರ್ಷ ಕುಮಾರ್ ಮತ್ತು ನವೀನ್ ಪೆರಾರ ಅವರ ಆಕರ್ಷಕ ಶೈಲಿಯ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss