ಮಂಗಳೂರು: ರಾಜ್ಯದ ಪ್ರಸಿದ್ಧ ಜಾನಪದ ಕ್ರೀಡೆ “ಕಂಬಳ’ ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಕಂಬಳದ ಹಿರಿಮೆಯನ್ನು ರಾಜ್ಯ-ರಾಷ್ಟ್ರ ವ್ಯಾಪಿ ಪಸರಿಸುವ ಆಶಯದೊಂದಿಗೆ ರಾಜ್ಯ ರಾಜಧಾನಿ ಯಲ್ಲಿ ಬೆಂಗಳೂರು ತುಳುಕೂಟದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪೂರಕ ಸಿದ್ಧತೆಗಳು ನಡೆಯುತ್ತಿವೆ.
ಅರಮನೆ ಮೈದಾನದಲ್ಲಿ ಆಯೋಜನೆಗೆ ಮೈಸೂರು ರಾಜಮನೆತನದ ಅನುಮತಿಯೂ ಲಭಿಸಿದೆ.