Monday, April 15, 2024
spot_img
More

  Latest Posts

  ಜೆಡಿಎಸ್ ದ.ಕ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಿಧನ..!!

  ಮಂಗಳೂರು: ಜಾತ್ಯತೀತ ಜನತಾದಳ ಘಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಮಹಿಳಾ ಘಟಕದ ಅಧ್ಯಕ್ಷೆ ಬೈದಾವು ಗುತ್ತು ಜಯಲಕ್ಷ್ಮಿ ಎಸ್. ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯ ಹೊಂದಿದ್ದು, ಗುರುವಾರ ಅ. 12ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಮತ್ತು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಅಡ್ಯಾರು ಮಹಿಳಾ ಮಂಡಲದ ಅಧ್ಯಕ್ಷರಾಗಿ 40 ವರ್ಷ ಸೇವೆ ಸಲ್ಲಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿಯ ಮುಖ್ಯ ಕಾರ್ಯಕರ್ತರಾಗಿಯೂ ಉಪಾಧ್ಯಕ್ಷರಾಗಿಯು ಕರ್ತವ್ಯ ನಿರ್ವಹಿಸಿದ್ದರು. ಅಡ್ಯಾರು ಗ್ರಾಮ ಪಂಚಾಯಿತಿನಲ್ಲಿ ಎರಡು ಅವಧಿಗೆ ಆಯ್ಕೆಯಾಗಿ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಲಹಾ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅಡ್ಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧ್ಯಕ್ಷರಾಗಿ, ಪ್ರಜ್ಞ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ, ವಸತಿಗೃಹದ ಕಮಿಟಿ ಸದಸ್ಯರಾಗಿ, ಶಿಶು ಪಾಲನಾ ಕೇಂದ್ರ ದಕ್ಷಿಣ ಕನ್ನಡ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಡ್ಯಾರು, ಅರ್ಕುಳ ಸೇರಿದಂತೆ ಹಲವು ಕಡೆ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಶ್ರಮಿಸಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss