ಕುಂದಾಪುರ: ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾಗಿ ಜಯರಾಮ್ ಡಿ. ಗೌಡ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಜಯರಾಮ್ ಡಿ. ಗೌಡರು 2012-14 ರವರೆಗೆ ಕುಂದಾಪುರದಲ್ಲಿ ಪಿಎಸ್‌ಐ ಆಗಿದ್ದು ಬಳಿಕ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಹೊಂದಿ ವಿವಿದೆಡೆ ಸೇವೆ ಸಲ್ಲಿಸಿ ಬಳಿಕ ಉಡುಪಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಕುಂದಾಪುರ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಶಂಕರನಾರಾಣಯದಲ್ಲಿ ಕಾರ್ಯಚರಿಸುವ ಕುಂದಾಪುರ ಪೊಲೀಸ್ ವೃತ್ತ ಕಚೇರಿ ವ್ಯಾಪ್ತಿ ಕುಂದಾಪುರ ಗ್ರಾಮಾಂತರ ಠಾಣೆ, ಅಮಾಸೆಬೈಲು ಹಾಗೂ ಶಂಕರನಾರಾಯಣ ಠಾಣಾ ವ್ಯಾಪ್ತಿಯನ್ನು ಒಳಗೊಂಡಿದೆ.