ಮಂಗಳೂರು: ಮನಪಾ ಬೋಳೂರು ವಾರ್ಡ್ ಕಾರ್ಪೊರೇಟರ್ ಜಗದೀಶ್ ಶೆಟ್ಟಿಯವರು ಇಂದು ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಡಿಸಿ ಆಫೀಸ್ ಬಳಿಯ ತಾಜ್ ಮಂಜೂರಾನ್ ಹೊಟೇಲ್ ಬಳಿಯಲ್ಲಿ ಕಾರಿನಲ್ಲಿಯೇ ಕುಳಿತು ಅವರು ವಿಷ ಸೇವನೆ ಮಾಡಿದ್ದಾರೆ. ವೀಳ್ಯದೆಲೆಗೆ ಸ್ಪ್ರೇ ಮಾಡುವ ರಾಸಾಯನಿಕವನ್ನು ಎರಡು ಸ್ಪೂನ್ ನಷ್ಟು ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ.. ಜಗದೀಶ್ ಶೆಟ್ಟಿಯವರು ವಿಷ ಸೇವಿಸಿ ಅಸ್ವಸ್ಥರಾಗಿದ್ದನ್ನು ನೋಡಿ ತಕ್ಷಣ ಅಲ್ಲಿದ್ದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಂದರ್ಭ ಅವರು ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಸದ್ಯ ಅವರನ್ನು ಐಸಿಯುನಲ್ಲಿರಿಸಿ ಪರಿಶೀಲನೆ ಮಾಡಲಾಗುತ್ತಿದೆ.
Trending
- ರೆಡ್ಕ್ರಾಸ್ನಿಂದ ವಿಶ್ವ ರಕ್ತದಾನಿಗಳ ದಿನಾಚರಣೆನಿರಂತರ ರಕ್ತದಾನದಿಂದ ಆರೋಗ್ಯಪೂರ್ಣ ಹೃದಯಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮಾಹಿತಿ
- ಮಳೆ ಹಾನಿಗೆ ಯಾವುದೇ ಸಾವು ನೋವುಗಳಾಗದಂತೆ ಎಚ್ಚರಿಕೆ ವಹಿಸಿ – ಜಿಲ್ಲಾಡಳಿತಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಗುಡ್ಡ ಕುಸಿತವಾದ ಸ್ಥಳಗಳಲ್ಲಿ ನ್ಯಾಷನಲ್ ಹೈವೇ ಅವರೊಂದಿಗೆ ಸಂಪರ್ಕದಲ್ಲಿದ್ದು ತೆರವು ಕಾರ್ಯಾಚರಣೆ ಕೈಗೊಳ್ಳಿ
- ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ:- ಶಾಸಕ ಕಾಮತ್
- ಮಂಗಳೂರು: ಮಳೆ ಬಿರುಸು ಹಿನ್ನಲೆ ; ದ.ಕ. ಜಿಲ್ಲೆಯ ಅಂಗನವಾಡಿಯಿಂದ ಪಿಯು ತರಗತಿವರೆಗೆ ಜೂನ್ 16 ಸೋಮವಾರ (ಇಂದು) ರಜೆ ಘೋಷಿಸಿ ಡಿಸಿ ಪರಿಷ್ಕೃತ ಆದೇಶ
- ಗಜಾನನ ಕ್ರಿಕೆಟರ್ಸ್ ಟೀಸರ್ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ತುಳು ಸಿನೆಮಾ.
- ಮಂಗಳೂರು: ರಸ್ತೆಗಳಿಗೆ ಉಕ್ಕಿ ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ ಮಳೆ ನೀರು
- ಮಂಗಳೂರಿನಲ್ಲಿ ಸ್ಪೆಷಲ್ ಆಕ್ಷನ್ ಪೋರ್ಸ್ ಕಾರ್ಯಪಡೆ ಕಚೇರಿ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್
- ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರಾಗಿ ಅಧಿಕಾರ ಸ್ವೀಕರಿಸಿದ ದಕ್ಷ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್