ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಕಛೇರಿಯ ಉದ್ಘಾಟನೆಯು ಎಂ.ಜಿ.ಎಂ ಕಾಲೇಜು ಮಣಿಪಾಲ ಬಳಿಯ ಕ್ಲಾಸಿಕ್ ಬಿಲ್ಡಿಂಗ್ ಮುಂಭಾಗದಲ್ಲಿ ನಡೆಯಿತು .ಕಛೇರಿಯ ಉದ್ಘಾಟನೆಯನ್ನು ಉಡುಪಿ ನಗರಸಭೆ ಸದಸ್ಯರಾದ ಶ್ರೀ ಗಿರೀಶ್ ಅಂಚನ್ ನೆರವೇರಿಸಿ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ಸಂಘಟನೆಯೊಂದಿಗೆ ಇದ್ದು ಸದಾಕಾಲವೂ ಸಹಾಯ ಹಸ್ತವನ್ನು ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ಶ್ರೀಮತಿ ಶಾಂಭವಿ ಮತ್ತು ಬಳಗದವರು ಪ್ರಾರ್ಥನೆ ಮೂಲಕ ಪ್ರಾರಂಭಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೇಶ್ ಶೆಟ್ಟಿ ಜಪ್ಪುರವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮದ ಉದ್ಘಾಟನೆ ಗೈದು ತು.ರ.ವೇ ಉದ್ದೇಶ ,ಸದಸ್ಯರ ರೀತಿ ನೀತಿಗಳು ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸಿ ; ಕಳೆದ ಹದಿನೈದು ವರುಷಗಳಿಂದ ಸಂಘಟನೆಯಲ್ಲಿ ತನ್ನ ಹೋರಾಟದ ಬಗ್ಗೆ ತಿಳಿಸಿ ಸಂಘಟನೆಗೆ ನಾವು ಹೇಗೆ? ಯಾವ ರೀತಿಯಲ್ಲಿ ? ಉತ್ತಮ ಕಾರ್ಯಕರ್ತರಾಗಿ ದುಡಿಯುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿ ನೂತನ ಕಚೇರಿಯು ಮುಂದಿನ ದಿನಗಳಲ್ಲಿ ಉಡುಪಿಯ ಜನತೆಗೆ ಒಳಿತನ್ನು ಉಂಟುಮಾಡುವ ಸೇವೆಯನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ತು.ರ.ವೇ ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಶಾಂತ್ ಭಟ್ ಕಡಬ ಪ್ರಸ್ತಾವನೆಗೈದರು. ತು.ರ.ವೇ ಉಡುಪಿ ಜಿಲ್ಲಾ ವೀಕ್ಷಕರಾದ ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಸಂಘಟನೆಯ ಉದ್ದೇಶ ಹಾಗೂ ಸಾಮಾಜಿಕ ಸೇವೆಯ ಬಗ್ಗೆ ತಿಳಿಸಿ ಮುಂದಿನ ದಿನಗಳಲ್ಲಿ ಸಂಘಟನೆಯ ಧ್ಯೇಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ತು.ರ.ವೇ ಉಡುಪಿ ತಾಲ್ಲೂಕು ಘಟದ ಅಧ್ಯಕ್ಷರಾದ ಶ್ರೀ ಕೃಷ್ಣಕುಮಾರ್ ,ಗೌರವ ಅಧ್ಯಕ್ಷರಾದ ಶ್ರೀ ರವಿ ಆಚಾರ್ಯ , ಗೌರವ ಸಲಹೆಗಾರ ಶ್ರೀ ಸುಧಾಕರ್ ಅಮೀನ್ , ಉಡುಪಿ ತಾಲ್ಲೂಕು ಘಟಕದ ಮಹಿಳಾ ಅಧ್ಯಕ್ಷೆ ಶ್ರೀಮತಿ ಶೋಭಾ ಪಾಂಗಳಾ , ಕಾಪು ತಾಲ್ಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಅನುಸೂಯ ಶೆಟ್ಟಿ ,ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಶ್ರೀ ರಾಹುಲ್ ಪೂಜಾರಿ ,ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗಲಕ್ಷ್ಮಿ ಕೋಶಾಧಿಕಾರಿ ಸುನಂದಾ ಟೀಚರ್ ಶ್ರೀ ಜಯರಾಮ್ ಪೂಜಾರಿ ,ಶ್ರೀ ರೋಶನ್ ಡಿಸೋಜ ,ಶ್ರೀಮತಿ ಉಷಾ ಹೆಜಮಾಡಿ , ಮಂಗಳೂರು ನಗರ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಶಾರದ ಶೆಟ್ಟಿ, , ಶ್ರೀಮತಿ ಸುನೀತಾ ಎಸ್ ಲಸ್ರದೊ , ಶ್ರೀಮತಿ ಗುಣವತಿ ,ಶ್ರೀಮತಿ ಸವಿತ ಪೂಜಾರ್ತಿ ,ಶ್ರೀ ವಿಜಯಲಕ್ಷ್ಮಿ , ಶ್ರೀಮತಿ ಶಾಂಭವಿ ,ಶ್ರೀಮತಿ ಲಕ್ಷ್ಮಿ ,ಶ್ರೀ ಬಲಭೀಮರಾಯ , ಶ್ರೀಮತಿ ರೇಣುಕಾ , ಶ್ರೀ ಹನುಮಂತಪ್ಪ , ಶ್ರೀಮತಿ ಹೆಲೆನ್ ಸೋನ್ಸ್ , ಶ್ರೀಮತಿ ಗುಲಾಬಿ , ಶ್ರೀ ಉಮೇಶ್ ಶೆಟ್ಟಿ ಬಾಣಬೆಟ್ಟು ,ಶ್ರೀಮತಿ ಸವಿತಾ ನಾಯರ್ , ಶ್ರೀಮತಿ ರೋಶನ್ ಬಲ್ಲಾಳ್ , ಶ್ರೀಮತಿ ಕೀರ್ತಿ ಶೆಟ್ಟಿ , ಶ್ರೀಮತಿ ದೀಪ ಶೆಟ್ಟಿ , ಶ್ರೀಮತಿ ಸರೋಜಿನಿ ಶೆಟ್ಟಿ , ಶ್ರೀಮತಿ ಜಯಲಕ್ಷ್ಮಿ ಹೆಗ್ಡೆ , ಶ್ರೀಮತಿ ರಂಜನಾ ಶೆಟ್ಟಿ , ಶ್ರೀಮತಿ ತನುಜಾ ದೀಪ್ತಿ ಮತ್ತಿತರರು ಉಪಸ್ಥಿತರಿದ್ದರು . ತು.ರ.ವೇ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕ ಪ್ರದೀಪ್ ಡಿ.ಎಮ್.ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಯಿತು.