Saturday, July 27, 2024
spot_img
More

    Latest Posts

    ಮಂಗಳೂರು: ಜಿಲ್ಲೆಯ ಮರಳು ಕೇರಳಕ್ಕೆ ಅಕ್ರಮ ಸಾಗಾಟ- ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

    ಮಂಗಳೂರು: ನಮ್ಮ ಜಿಲ್ಲೆಯಲ್ಲಿ ಇರುವ ಮರಳು ನಮ್ಮ ಜಿಲ್ಲೆಯ ಉಪಯೋಗಕ್ಕೆ ಬಳಕೆ ಮಾಡಬೇಕು. ಸದ್ಯಕ್ಕೆ ನನಗಿರುವ ಮಾಹಿತಿ ಪ್ರಕಾರ ನಮ್ಮ ಜಿಲ್ಲೆಯ ಮರಳು ರಾತ್ರಿಯ ವೇಳೆಗೆ ಕೇರಳದ ಕಡೆಗೆ ಹೋಗುತ್ತಿದೆ ಅನ್ನುವ ಮಾಹಿತಿ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.

    ಮರಳು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟವಾಗುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕಳೆದ ಒಂದು ವಾರದ ಹಿಂದೆ ರಾತ್ರಿ 11 ಗಂಟೆಯ ಸಮಯದಲ್ಲಿ ಕೇರಳ ಭಾಗಕ್ಕೆ ನಮ್ಮ ಕಡೆಯಿಂದ ಎಷ್ಟು ಮರಳು ತುಂಬಿದ ಲಾರಿಗಳು ಬರುತ್ತವೆ ಅನ್ನುವುದನ್ನು ನೋಡುವುದಕ್ಕೆ ಹೋಗಿದ್ದೆ. ಆಗ ಸುಮಾರು 2 ರಿಂದ 3 ಮರಳು ಲಾರಿಗಳು ನಮ್ಮ ಕಡೆಯಿಂದ ಕೇರಳ ಕಡೆಗೆ ಬಂದು ನಿಂತಿದ್ದನ್ನು ನಾನು ಗಮನಿಸಿದ್ದೇನೆ. ಆದ್ರೆ ಇವುಗಳು ನಿಯಮಗಳನ್ನು ಪಾಲನೇ ಮಾಡಿದೆಯೋ ಅಥವಾ ಮಾಡಿಲ್ಲವೋ ಅನ್ನುವುದನ್ನು ಪರಿಶೀಲನೆ ಮಾಡುವುದಕ್ಕೆ ಹೋಗಿಲ್ಲ. ಈ ಹಿಂದೆ ಇಲ್ಲಿ ಮರಳು ಸಾಗಾಟಕ್ಕೆ ಅಧಿಕೃತವಾಗಿ ಪರವಾನಿಗೆ ನೀಡಿದ್ರೆ ಅಂತಹ ಸಂದರ್ಭದಲ್ಲಿ ನಮಗೆ ಪರಿಶೀಲನೆ ಮಾಡುವುದಕ್ಕೆ ಅವಕಾಶವಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಅಕ್ರಮ ಮರಳು ಸಾಗಾಟದ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದ್ರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss