ಉಡುಪಿ: ನಗರ ಸಭೆ ಮತ್ತು ಅದರ ಸುತ್ತಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ಬಡ ಕುಟುಂಬಗಳು ವಾಸವಾಗಿದ್ದು, ಅವರು ಹಲವಾರು ವರ್ಷಗಳಿಂದ ಸರಕಾರದ ವಸತಿ ನಿವೇಶನದಲ್ಲಿ ವಾಸ ಮಾಡಿಕೊಂಡು ಬರುತ್ತಿದ್ದು ಅದರಲ್ಲಿ ವಿದ್ಯುತ್ ಸಂಪರ್ಕ, ಪಡಿತರ ಚೀಟಿ, ಆಧಾರ್ ಕಾರ್ಡ್, ಭೂಕಂದಾಯ ರಶೀದಿ ಮತ್ತು ಮನೆ ತೆರಿಗೆ ರಶೀದಿ ಎಲ್ಲವನ್ನು ಹೊಂದಿದ್ದು ಕುಟುಂಬದೊಂದಿಗೆ ವಾಸಮಾಡಿಕೊಂಡು ಬಂದಿರುತ್ತಾರೆ. ಅವರು ತಮ್ಮ ಮನೆ ವಾ ಜಾಗದ ಕುರಿತು ಈಗಾಗಲೇ ಅಕ್ರಮ ಸಕ್ರಮ
ಕಾನೂನಿನ ಅಡಿ ಅರ್ಜಿ ಸಲ್ಲಿಸಿದ್ದು ಕೆಲವೊಂದು ಕಾನೂನಿನ ಅಡೆ ತಡೆ ವಾ ತೊಂದರೆಯಿಂದ ಅವರಿಗೆ ಸದ್ರಿ ನಿವೇಶನವನ್ನು ಮಂಜೂರು ಮಾಡಲು ಆಗುವುದಿಲ್ಲ ಎಂದು ಅಧಿಕಾರಿ ವರ್ಗದವರು ಹಿಂದೇಟು ಹಾಕುತ್ತಿದ್ದು ಇದರಿಂದ ಕಾರ್ಮಿಕ ವರ್ಗದವರು ಮತ್ತು ಬಡ ಜನರಿಗೆ ತುಂಬಾ ಅನಾನುಕೂಲವಾಗುತ್ತಿದ್ದು ಅವರಿಗೆ ನಿವೇಶನವನ್ನು ಅಡಮಾನ ಇನ್ನಿತರ ಯಾವುದೇ ರೀತಿಯ ಕೃತ ಮಾಡಲು ಸಾಧ್ಯವಾಗುವುದಿಲ್ಲ.
ಕರ್ನಾಟಕ ಭೂಕಂದಾಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ ಸದ್ರಿ ಬಡ ಕುಟುಂಬದವರಿಗೆ ಅಕ್ರಮ ಸಕ್ರಮ ಮಂಜೂರು ಮಾಡಿ ಸದ್ರಿ ಕಾನೂನಿನ ಸೂಕ್ತ ತಿದ್ದುಪಡಿ ಮಾಡುವರೇ ಕುರಿತು ನಿರ್ದೇಶನ ನೀಡಬೇಕಾಗಿ ವಿನಂತಿ, ಬೇರೆ ಬೇರೆ ಊರಿನ ಕೂಲಿ ಕಾರ್ಮಿಕ ವರ್ಗದವರು ಹಲವಾರು ವರ್ಷಗಳಿಂದ ಒಂದು ಸದ್ರಿ ಜಾಗದಲ್ಲಿ ಜೋಪಡಿ ಹಾಕಿ ನೆಲೆಸಿಕೊಂಡು ವಾಸವಾಗಿರುವರು. ತಮ್ಮ ಸದ್ರಿ ಜಾಗವನ್ನು ಅವರಿಗೆ ಮಂಜೂರು ಮಾಡಿದ್ದಲ್ಲಿ ಅವರು ಸ್ವಂತ ಸೂರು ಹೊಂದಿ ವಾಸವಾಗಿರಲು ಯೋಗ್ಯವಾಗಿರುತ್ತದೆ. ಇದರಿಂದ ಬಡ ಜನರ ಏಳಿಗೆಯಾಗುತ್ತದೆ.
ಆದುದರಿಂದ ತಾವು ನಗರ ಸಭೆ/ ಅದರ ಸುತ್ತಮುತ್ತಲಿನ 5.ಕಿಲೋಮೀಟರ್ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಇರುವ ಅಕ್ರಮ ಸಕ್ರಮ ಅರ್ಜಿಯನ್ನು ಶೀಘ್ರವಾಗಿ ವಿಲೇಗೊಳಿಸುವರೇ ಹಾಗೂ ಅವರಿಗೆ ಹಕ್ಕು ಪತ್ರ ನೀಡುವರೇ ಸೂಕ್ತ ಮಾರ್ಗದರ್ಶನ ನೀಡಬೇಕಾಗಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ವತಿಯಿಂದ ತುರವೇ ಉಡುಪಿ ಜಿಲ್ಲಾ ವೀಕ್ಷಕ ಪ್ರಾಂಕಿ ಡಿಸೋಜ ನೇತೃತ್ವದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿದರು.ತಾಲೂಕು ಅದ್ಯಕ್ಷ ಕೃಷ್ಣಕುಮಾರ್ ಉಪಾಧ್ಯಕ್ಷರಾದ ಜಯ ಪೂಜಾರಿ ,ಗಣೇಶ್ ಮಲ್ಯ, ಮಹಿಳಾ ಅಧ್ಯಕ್ಷೆ ಶೋಭಾ ಮತ್ತಿತರರು ಉಪಸ್ಥಿತರಿದ್ದರು.
