Tuesday, July 23, 2024
spot_img
More

    Latest Posts

    ಮಂಗಳೂರು ವಿವಿ ಕಾಲೇಜ್‌ನಲ್ಲಿ ಮಾನವ ಕಳ್ಳ ಸಾಗಾಣಿಕೆ ಕುರಿತು ಕಾರ್ಯಾಗಾರ

    ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಕ್ಲಬ್ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ: ಕಾಳಜಿ ಹಾಗೂ ಕಾರ್ಯಯೋಜನೆ ಎಂಬ ಕಾರ್ಯಾಗಾರ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜ್‌ನ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆಯಿತು.

    ಮಂಗಳೂರು ಉತ್ತರ ಉಪವಿಭಾಗ ಸಹಾಯಕ ಆಯುಕ್ತರಾದ ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತದಲ್ಲಿ ಇರುವಷ್ಟು ಕಾನೂನು ಬೇರೆಲ್ಲಿಯೂ ಇಲ್ಲ ಆದರೆ ಸರಿಯಾಗಿ ಬಳಸಿಕೊಳ್ಳಲು ಆಗುತ್ತಿಲ್ಲ, ಹೊಸ ಕಾನೂನು ಜಾರಿಗೆ ಬಂದಾಗ ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವಂತಹ ರಿಸರ್ಚ್ ನಡೆಯುತ್ತದೆ. ಕಾನೂನು ಪಾಲನೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು. ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್ ವಿಭಾಗ ಮುಖ್ಯಸ್ಥರಾದ ಪ್ರತಿಮಾ ಎಂ., ಮಾನವ ಕಳ್ಳ ಸಾಗಾಣಿಕೆಗೆ ವಿದ್ಯಾರ್ಥಿಗಳು ತೆಗೆದು ಕೊಳ್ಳಬೇಕಾದ ಕ್ರಮ ದ ಬಗ್ಗೆ ಜಾಗೃತಿ ಮೂಡಿಸಿದರು. ವಿಶ್ವವಿದ್ಯಾಲಯ ಕಾಲೇಜ್‌ನ ಪ್ರಿನ್ಸಿಪಾಲ್ ಡಾ.ಅನಸೂಯ ರೈ ಭಾಗವಹಿಸಿದ್ದರು. ಎ. ಎಚ್. ಟಿ. ಸಿ. ಚೇರ್ಮ್ಯಾನ್ ಪ್ರೋ.ಜಯರಾಜ್ ಅಮೀನ್ ಸ್ವಾಗತಿಸಿದರು. ಡಾ.ಗಾಯತ್ರಿ ನಿರೂಪಿಸಿದರು. ಎ.ಎಚ್.ಟಿ.ಸಿ. ಸದಸ್ಯ ಕಾರ್ಯದರ್ಶಿ ಡಾ.ನಾಗರತ್ನ ಕೆ.ಎ.ವಂದಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss