Saturday, April 20, 2024
spot_img
More

  Latest Posts

  ಬಂಟ್ವಾಳದಲ್ಲಿ ಭೀಕರ ಅಪಘಾತ -ಸವಾರನಿಗೆ ಗಂಭೀರ ಗಾಯ

  ಬಂಟ್ವಾಳ: ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

  ಅಪಘಾತದಲ್ಲಿ ಬೈಕ್ ಸವಾರ ಬೆಳ್ತಂಗಡಿ ನಿವಾಸಿ ಮಹಮ್ಮದ್ ಸುಹೈಲ್ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಟ್ವಾಳ ಕೆಳಗಿನ ಪೇಟೆಗೆ ಬಂದು ಬೆಳ್ತಂಗಡಿ ಗೆ ತೆರಳುವ ವೇಳೆ ಜಕ್ರಿಬೆಟ್ಟು ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ. ಬಂಟ್ವಾಳ ಪೇಟೆಯಿಂದ ಜಕ್ರಿಬೆಟ್ಟು ಜಂಕ್ಷನ್ ಭಾಗದಲ್ಲಿ ಧರ್ಮಸ್ಥಳ ರಸ್ತೆಗೆ ಕ್ರಾಸಿಂಗ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

  ಇದೊಂದು ಅವೈಜ್ಞಾನಿಕ ರೀತಿಯ ಕ್ರಾಸಿಂಗ್ ಆಗಿದ್ದು ಅನೇಕ ಬಾರಿ ಈ ಭಾಗದಲ್ಲಿ ಅಪಘಾತಗಳು ನಡೆದು ಪ್ರಾಣಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಗತ್ಯವಿಲ್ಲದ ರಸ್ತೆಗಳಲ್ಲಿ ರಸ್ತೆ ಹಂಪ್ಸ್ ಗಳನ್ನು ಹಾಕೋ ಬದಲು ಇಂತಹ ರಸ್ತೆಯಲ್ಲಿ ಹಂಪ್ಸ್ ಹಾಕುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss