Friday, June 14, 2024
spot_img
More

  Latest Posts

  ಪಡುಬಿದ್ರಿ: ಹೆಜ್ಜೇನು ದಾಳಿ- ಸಮುದ್ರಕ್ಕೆ ಹಾರಿದ ವ್ಯಕ್ತಿ ಸಾವು, ಒರ್ವ ಗಂಭೀರ

  ಪಡುಬಿದ್ರಿ ಮುಖ್ಯ ಬೀಚ್ ಬಳಿ ಹೆಜ್ಜೇನು ದಾಳಿಯಿಂದಾಗಿ ಒರ್ವ ಮೃತಪಟ್ಟರೆ ಮತ್ತೊರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು ಹಲವರು ಗಾಯಗೊಂಡಿದ್ದಾರೆ.

  ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಾಸುದೇವ ಡಿ. ಸಾಲ್ಯಾನ್ (65), ಗಂಬೀರ ಗಾಯಗೊಂಡವರು ಚಂದ್ರಶೇಖರ್ (65), ಇವರು ಬೀಚ್ ಬಳಿ ಅಡ್ಡಾಡುತ್ತಿದ್ದಾಗ ದಾಳಿ ನಡೆಸಿದ್ದು ದಾಳಿ ಮಾಡಿದ ತಕ್ಷಣ ವಾಸುದೇವ್ ರಕ್ಷಣೆಗಾಗಿ ಸಮುದ್ರದ ನೀರಿಗೆ ಹಾರಿದವರು ಮತ್ತೆ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅದೇ ವೇಳೆ ಪಕ್ಕದಲ್ಲಿದ್ದ ಚಂದ್ರಶೇಖರ್ ರವರಿಗೂ ದಾಳಿ ನಡೆದಿದ್ದು ಅವರನ್ನು ತಕ್ಷಣ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.  ಸ್ಥಳೀಯ ವಾಗಿ ಹಲವರ ಮೇಲೆ ದಾಳಿ ನಡೆಯಿತಾದರೂ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.

  ಪಕ್ಕದಲ್ಲೇಆಂಗ್ಲ ಮಾದ್ಯಮ ಶಾಲೆಯೊಂದಿದ್ದು ಶಾಲೆ ಬಿಟ್ಟು ಶಾಲಾ ವಾಹನ ಮಕ್ಕಳನ್ನು ಹೇರಿಕೊಂಡು ಹೋಗಿದ್ದರಾದರೂ ನಡೆದುಕೊಂಡು ಹೋಗುವ ಮಕ್ಕಳು ಇನ್ನೇನು ಆ ಪ್ರದೇಶಕ್ಕೆ ಬರುತ್ತಾರೆ ಎನ್ನುವಾಗ ಸಾರ್ವಜನಿಕರು ಬೊಬ್ಬೆ ಹಾಕಿ ಮಕ್ಕಳನ್ನು ತಡೆದ್ದರಿಂದ ಬಾರೀ ಅನಾಹುತ ತಪ್ಪಿದಂತ್ತಾಗಿದೆ. ಭಾನುವಾರವಾಗಿದ್ದರೆ ಈ ಬೀಚ್ ಪ್ರದೇಶದಲ್ಲಿ ಬಾರೀ ಜನ ಸಂದಾಣಿ ಇರುತ್ತಿದ್ದು ಮತ್ತಷ್ಟು ದುರಂತ ಸಾಧ್ಯವಿತ್ತು ಎನ್ನುತ್ತಾರೆ ಸ್ಥಳೀಯರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರು ಆ ಹೆಜ್ಜೇನು ಹಿಂಡನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss