Thursday, May 30, 2024
spot_img
More

  Latest Posts

  ಹೃದಯಘಾತದಿಂದ ಯುವಕ ಸಾವು..!

  ದಾಂಡೇಲಿ: ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ  ಯುವಕನೋರ್ವ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ.

  ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿ ಅಸ್ಲಾಂ ಕಾಸೀಂ ಸಾಬ್ ಶೇಖ (23) ಮೃತ ಯುವಕನಾಗಿದ್ದಾನೆ.ಕಾಸೀಂನು ಜೆ.ಸಿ.ಬಿ. ಆಪರೇಟರ್ ವೃತ್ತಿಯನ್ನು ಮಾಡುತ್ತಿದ್ದು, ಇಂದು ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು.

  ಹಾಗಾಗಿ ಕೂಡಲೇ ಆತನನ್ನು ನಗರದದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು.ಆದರೆ ಅಷ್ಟರಲ್ಲಿ ಆವರು ಕೊನೆಯುಸಿರೆಳೆದಿದ್ದಾರೆ.

  ಮೃತ ಯುವಕ 8 ವರ್ಷ ಇರುವಾಗಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ಕಾರಣ ಮಾವನ ಮನೆಯಲ್ಲಿ ವಾಸವಿದ್ದರು.ಇದೀಗ ಅವರು ಅತ್ತೆ, ಮಾವ, ಓರ್ವ ಸಹೋದರ, ಓರ್ವ ಸಹೋದರಿ ಸೇರಿದಂತೆ ಸಬಂಧಿಕರನ್ನು ಅಗಲಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss