Monday, June 24, 2024
spot_img
More

  Latest Posts

  ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ಆತ್ಮಹತ್ಯೆ

  ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಮಂಗಳೂರು ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂಬವರು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.

  ಸೆ.24 ರಂದು ಸಂಜೆ ಮನೆಯಿಂದ ಹೊರಟವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರಿಸಿ,ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ತೆರಳಿ ಅಲ್ಲಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತ ರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಕುಡಿದು ಕೃತ್ಯವನ್ನು ಎಸಗಿರುವುದಾಗಿ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss