Monday, July 15, 2024
spot_img
More

  Latest Posts

  ಕಾರ್ಕಳ: ಹೆಡ್‌ ಕಾನ್ ಸ್ಟೇಬಲ್ ನೇಣು ಬಿಗಿದು ಆತ್ಮಹತ್ಯೆ!

  ಕಾರ್ಕಳ: ಕಾರ್ಕಳ ನಗರ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ಮಿಯ್ಯಾರು ನಿವಾಸಿ ಎಚ್. ಸಿ. ಪ್ರಶಾಂತ್ (49) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿಯಾಗಿದ್ದ ಅವರು ಅವಿವಾಹಿತರಾಗಿದ್ದರು. ನಗರ ಠಾಣೆಯಿಂದ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು. ಸೇರಿಕೊಳ್ಳದೆ ರಜೆ ಮೇಲೆ ತೆರಳಿದ್ದರು. ಜುಲೈ 16ರಂದು ಮುಂಜಾನೆ ತಾನು ವಾಸವಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ತಾಯಿಯನ್ನು ಅಗಲಿದ್ದಾರೆ. ಸಹೋದ್ಯೋಗಿಗಳು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss