ಕಾಪು : ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯುವ ವೇಳೆ ಕರೆಂಟ್ ಹೊಡೆದು ಯುವಕ ಸಾವನಪ್ಪಿದ ಘಟನೆ ಕಾಪು ತಾಲೂಕು ಕುರ್ಕಾಲು ಗ್ರಾಮದಲ್ಲಿ ನಡೆದಿದೆ.ಮೃತ ಯುವಕನನ್ನು ಮಹಾರಾಷ್ಟ ಮೂಲದ ಪವನ್ ಶ್ರವಣ್ ಸೇವಂತ್ (20) ಎಂದು ಗುರುತಿಸಲಾಗಿದೆ. ಈತ ಅಡಿಕೆ ತೆಗೆಯಲು ಹೋಗಿದ್ದ ಯುವಕ ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯಲು ಮುಂದಾಗಿದ್ದ ಈ ವೇಳೆ ವಿದ್ಯುತ್ ತಂತಿಗೆ ರಾಡ್ ತಗಲಿ ಯುವಕನ ಸಾವಿಗೆ ಕಾರಣವಾಗಿದೆ. ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
©2021 Tulunada Surya | Developed by CuriousLabs