ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟುಹಬ್ಬದ ಅಂಗವಾಗಿ ಯುವ ಘಟಕ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಆ.28 ಶನಿವಾರ ರಂದು ಬೆಳಗ್ಗೆ 10.00ಕ್ಕೆಮಂಗಳೂರಿನ ಲೇಡಿಗೋಷನ್ ಸರಕಾರಿ ಆಸ್ಪತ್ರೆ ಬಳಿ ಇರುವ ರೆಡ್ ಕ್ರಾಸ್ ಸಂಸ್ಥೆ ಯ ಬ್ಲಡ್ ಬ್ಯಾಂಕ್ ನಲ್ಲಿ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ರವರು ದೀಪ ಬೆಳಗುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಕ್ತದಾನ ಶ್ರೇಷ್ಠ ದಾನ. ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅದೆಷ್ಟೋ ರೋಗಿಗಳಿಗೆ ನಾವು ನೀಡುವ ರಕ್ತವು ಸಂಜೀವಿನಿ ಯಂತೆ ಜೀವ ಬದುಕಿಸುವುದಲ್ಲದೆ ಹೊಸ ಬದುಕು ಸಿಗಲು ಕಾರಣವಾಗಲಿದೆ. ಕಳೆದ ಹಲವಾರು ವರ್ಷಗಳಿಂದ ಯುವ ಘಟಕದ ವತಿಯಿಂದ ಜಿಲ್ಲೆಯ ವಿವಿದೆಡೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದೂ ಈ ವರ್ಷವೂ ಯುವ ಘಟಕದ ವತಿಯಿಂದ ರಕ್ತ ದಾನ ಶಿಬಿರ ಆಯೋಜಿಸದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜನರು ಅದರಲ್ಲೂ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಕರೆ ನೀಡಿದರು.
ತುಳುನಾಡ ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರರು ಖ್ಯಾತ ವಕೀಲ ರಾಘವೇಂದ್ರ ರಾವ್ ರವರು ರಕ್ತದಾನಗೈದು ಮಾತನಾಡುತ್ತಾ ” ನಾನು ಕಳೆದ 8 ವರ್ಷಗಳಿಂದ ಯೋಗಿಶ್ ಶೆಟ್ಟಿ ಜಪ್ಪು ರವರ ಹುಟ್ಟು ಹಬ್ಬದ ದಿನ ರಕ್ತದಾನ ಮಾಡುತ್ತಿದ್ದು ಅವರ ಜನಪರ ಹೋರಾಟ ಮತ್ತು ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿ” ಎಂದರು.

ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಮಂಗಳೂರು ನಗರ ಘಟಕದ ಅಧ್ಯಕ್ಷರಾದ ಶರಣರಾಜ್ ಕೆ ರ್, ಯುವ ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಶಕ್ತಿನಗರ ಸೇರಿದಂತೆ ಹಲವಾರು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.ದಕ್ಷಿಣ ಕನ್ನಡ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಮೋಹನ್ ಶೆಟ್ಟಿಯವರು ತುಳುನಾಡ ರಕ್ಷಣಾ ವೇದಿಕೆಯ ಕಾರ್ಯಕ್ರಮಗಳನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿದ್ದು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಕ್ಲೀಟಸ್ ಲೋಬೊ,ಶಾರದಾ ಶೆಟ್ಟಿ,ಗೋಲ್ಡನ್ ಫಾರೂಕ್, ಶೋನ್ ಡಿಸೋಜಾ ಗೈಟನ್ ರೋಡ್ರಿ ಗಸ್ ಮತ್ತಿತರರು ಉಪಸ್ಥಿತರಿದ್ದರು.