Monday, July 22, 2024
spot_img
More

    Latest Posts

    ಎಚ್. ಪಿ. ಸಿ. ಲ್ ಟ್ಯಾಂಕರ್ ಕಂಡೆಕ್ಟರ್ಗಳ ಮುಷ್ಕರ

    ಸುರತ್ಕಲ್ ಇಲ್ಲಿನ HPCL ನಲ್ಲಿ ಸುಮಾರು 25 ವರ್ಷಗಳಿಂದ ಬುಲೇಟ್ ಟ್ಯಾಂಕರ್ ಗ್ಯಾಸ್ ಫಿಲ್ಲಿಂಗ್ ಮಾಡಲು ಕ್ಲೀನರ್ ಗಳ ಮೂಲಕವೇ ಒಳಗೆ ಪ್ರವೇಶಿಸಲು ಅನುಮತಿ.ಆದ್ದರಿಂದ ಇಲ್ಲಿನ ಟ್ಯಾಂಕರ್ ಚಾಲಕರಿಗೆ ಅವರ ಗಾಡಿ ಲೊಕೇಷನ್ ಸೀರಿಯಲ್ ಬರಲು ಎರಡು ಮೂರು ದಿನ ತಗಲುವ ಸಲುವಾಗಿ ಪರ್ಮನೆಂಟ್ ಕ್ಲೀನರ್ ನೇಮಿಸಲು ಅವರಿಗೆ ಹೊರೆಯಾಗುತ್ತಿದೆ…ಆದ್ದರಿಂದ ಅವರು ಇಲ್ಲಿಯ ಸ್ಥಳೀಯ ನಿವಾಸಿಗಳನ್ನು ಕ್ಲೀನರಾಗಿ ಅವಲಂಬಿಸಿರುತ್ತಾರೆ.

    ಇದರಿಂದ ಇಲ್ಲಿನ ಸುಮಾರು ಎಂಟು ನೂರು ಅಧಿಕ ಸ್ಥಳೀಯ ಯುವಕರು ಸಹ ಸುಮಾರು 25 ವರ್ಷಗಳಿಂದ ದುಡಿಮೆ ರೂಪದಲ್ಲಿ ಇದನ್ನೇ ಅವಲಂಬಿಸಿದ್ದಾರೆ… ಈಗ ಒಂದು ವಾರದಿಂದ ಇದ್ದಕ್ಕಿದ್ದಂತೆ ಇಲ್ಲಿನ ಟ್ಯಾಂಕರ್ ಮಾಲಕರು without cleaner ಗೆ ಪರ್ಮಿಷನ್ ಗೆ ಪೆಟ್ಟು ಹಿಡಿದ್ದರಿಂದ HCPL ಅಧಿಕಾರಿಗಳು ಇವರ ಬೇಡಿಕೆಗೆ ಕ್ಯಾರೇ ಮಾಡಲಿಲ್ಲ .ಇದರಿಂದ ಒಂದು ವಾರಗಳ ಟ್ಯಾಂಕರ್ ಲೋಡಿಂಗ್ ಆಗದೆ ನಿಂತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಭರತ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಸುಮಾರ್ ಎಂಟು ನೂರು ಅಧಿಕ ಸ್ಥಳೀಯ ನಿವಾಸಿಗಳ ಕೆಲಸಕ್ಕೆ ಕುತ್ತು ಬಂದ ವಿಷಯವನ್ನು ಅರಿತ ಶಾಸಕ ಭರತ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಹಾಗೂ ವಿ.ಜಿ.ಗುರುಚಂದ್ರ ಹೆಗ್ಗಡೆಯವರು ತುರ್ತಾಗಿ ಸ್ಥಳೀಯ ಕಾರ್ಮಿಕರನ್ನು ಭೇಟಿಯಾಗಿ ಇಲ್ಲಿನ ಕಾರ್ಮಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿ ಜಿಲ್ಲಾಧಿಕಾರಿಯ ನಡೆಯ ಬಗ್ಗೆ ಆಕ್ರೋಶಗೊಂಡು ಇಲ್ಲಿನ ಕ್ಲೀನರ್ ಗಳ ಪರವಾಗಿ HPCL ಅಧಿಕಾರಿಗಳೊಂದಿಗೆ ರಾತ್ರಿ ಒಂದು ಗಂಟೆಯವರೆಗೆ ಒಂದರ ಹಿಂದೊಂದು ಸಭೆ ನಡೆಸಿದರು.

    ತದನಂತರ ಮಾತನಾಡಿದ ಶಾಸಕ ಭರತ್ ಶೆಟ್ಟಿ ನಮ್ಮ ಭೂಮಿ ಕಿತ್ತುಕೊಂಡು ನಮಗೆ ಉದ್ಯೋಗ ಕೊಟ್ಟು ಅದನ್ನು ಏಕಾಏಕಿ ಹಿಂಪಡೆದ ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ನಿವಾಸಿಗಳಿಗೆ ಜೀವ ಕೊಟ್ಟಾದರು ನ್ಯಾಯ ಒದಗಿಸುವ ಭರವಸೆ ನೀಡಿದರು. ಅದೇ ರೀತಿ MP ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದರು ಅವರು ಕೂಡ ಅಶ್ವಾಸನೆ ನೀಡಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss