Friday, July 26, 2024
spot_img
More

    Latest Posts

    ಗುರುವನ್ನು ದೇವರೆಂದು ಭಾವಿಸುವ ದೇಶವಿದು, ಲೈಂಗಿಕ ಕಿರುಕುಳ ನೀಡುವ ಶಿಕ್ಷಕ ಜಾಮೀನಿಗೆ ಅರ್ಹನಲ್ಲ -ಹೈಕೋರ್ಟ್

    ಬೆಂಗಳೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಬಂಧ ಬಂಧನಕ್ಕೆ ಒಳಗಾಗಿದ್ದಂತ ಶಾಲಾ ಶಿಕ್ಷಕ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಮಧುಗಿರಿ ತಾಲೂಕಿನ ಬಡವನಹಳ್ಳಿಯ ಶಿಕ್ಷಕ ಸಿ.ಮಂಜುನಾಥ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ನಡೆಸಿದರು.ಗುರುವನ್ನು ದೇವರೆಂದು ಭಾವಿಸುವ ದೇಶವಿದು.

    ಈ ಶಿಕ್ಷಕನ ಕೃತ್ಯದಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುವುದು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಡರಿಯಬಹುದು. ಹೀಗಾಗಿ ಜಾಮೀನಿಗೆ ಅರ್ಹನಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು.

    ಅಂದಹಾಗೇ ಮಾ.27ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಾಲೆಯೊಂದರ ಸಹಾಯಕ ಶಿಕ್ಷಕ ಸಿ.ಮಂಜುನಾಥ್ ವಿರುದ್ಧ ಪೋಷಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಮಾಡಿದ್ದರು. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳ ಮುಂದೆ ವಿದ್ಯಾರ್ಥಿನಿಯರು ಶಿಕ್ಷಕನ ದುರ್ವರ್ತನೆ ಬಗ್ಗೆ ಹೇಳಿಕೆ ನೀಡಿದ್ದರು.

    ವಿದ್ಯಾರ್ಥಿನಿಯರ ಹೇಳಿಕೆ ಹಿನ್ನಲೆಯಲ್ಲಿ ಶಿಕ್ಷಕ ಸಿ.ಮಂಜುನಾಥ್ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇಂತಹ ಶಿಕ್ಷ ಸಿ.ಮಂಜುನಾಥ್ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು ಹೈಕೋರ್ಟ್ ಜಾಮೀನಿಗೆ ಅರ್ಹನಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟು ವಜಾಗೊಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss