ಬೆಂಗಳೂರು: ಸ್ಪೀಕರ್ ಯು ಟಿ ಖಾದರ್ ಅವರಿಗೆ ಇಂಡಿಯನ್ ಕಾನ್ಸರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ಸಂಸ್ಥೆಯಿಂದ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ದೆಹಲಿಯಲ್ಲಿ ರವಿವಾರ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಗೋಪಾಲ್ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಛತ್ತೀಸ್ ಗಢದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚರಣ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಆತ್ಮಕತೆ ‘ಬ್ಯಾಟಲ್ ನಾಟ್ ಓವರ್’ ಕೃತಿಯ ಇಂಗ್ಲೀಷ್ ಅನುವಾದವೂ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೇಶದ ಹಿರಿಯ ನ್ಯಾಯಾಧೀಶರುಗಳು ಹಾಗೂ ಅಧಿಕಾರಿಗಳು ಇಂಡಿಯನ್ ಕಾನ್ಸರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ನ ಪದಾಧಿಕಾರಿಗಳು, ಸದಸ್ಯರು ಹಾಗೂ ಪೋಷಕರಾಗಿದ್ದಾರೆ. ಇಂಡಿಯನ್ ಕಾನ್ಸರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ಸಂಸ್ಥೆಯಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ ಹಲವು ಖ್ಯಾತ ನ್ಯಾಯಾಧೀಶರು, ಕಲಾವಿದರು, ಉದ್ಯಮಿಗಳು, ವಿಜ್ಞಾನಿಗಳು ಮತ್ತಿತರ ಹಿರಿಯ ಸಾಧಕರು ಹಾಗೂ ಬುದ್ಧಿ ಜೀವಿಗಳಿಗೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

