ಮಂಗಳೂರು: ಗಾಂಜಾ ಸೇವನೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆಂಬ ಆರೋಪದಲ್ಲಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಮನೀಷ್ ಎಂದು ಗುರುತಿಸಲಾಗಿದೆ. ಇವರು ಮಣ್ಣಗುಡ್ಡೆಯಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದು ಅ.30ರಂದು ಕೆಲಸ ಮುಗಿಸಿ ಕಾಳಿ ಚರಣ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡಿಕೊಂಡು ಅಲ್ಲಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಅವರ ಪರಿಚಯದ ಅವಿನಾಶ್, ರೋಶನ್ ಕಿಣಿ ಮತ್ತು ಶಿವು ತಡೆದು ನಿಲ್ಲಿಸಿ ‘ಗಾಂಜಾ ಸೇವನೆಯ ಬಗ್ಗೆ ನೀನು ಪೊಲೀಸರಿಗೆ ಭಾರೀ ಮಾಹಿತಿ ನೀಡುತ್ತೀಯಾ?” ಎನ್ನುತ್ತಾ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸ ಲಾಗಿದೆ. ಅಲ್ಲದೆ ಫ್ರೆಂಡ್ಸ್ ಕ್ಲಬ್ ನ ಬಾಗಿಲಿನ ಬೀಗ ಒಡೆದು ಹಾಕಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
©2021 Tulunada Surya | Developed by CuriousLabs