ಬಂಟ್ವಾಳ : ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ ರಾತ್ರಿ ಅಗ್ನಿ ಅವಘಡವಾಗಿದೆ.
ಗ್ಯಾಸ್ ಸೋರಿಕೆಯಾಗಿರುವುದು ತಿಳಿಯದೆ ರಾತ್ರಿ ಅಡುಗೆ ಮಾಡಲು ಗ್ಯಾಸ್ ಉರಿಸಲು ಹೋದಾಗ ಬೆಂಕಿ ಅವಘಡ ವಾಗಿದೆ ,ಬಂಟ್ವಾಳ ಅಗ್ನಿ ಶಾಮಕ ದಳದವರು ಬೆಂಕಿ ಆರಿಸಿದರು ಗ್ರಾಮಸ್ಥರು ಸಹಕರಿಸಿದರು.ಗ್ರಾಮ ಕರಣಿಕರಾದ ಅಶ್ವಿನಿ ಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.