Friday, March 29, 2024
spot_img
More

    Latest Posts

    ಬೇಸಿಗೆಯ ಹೀಟ್‌ ಕಡಿಮೆ ಮಾಡಲು ಈ ರೀತಿ ಫ್ರೂಟ್‌ ಸಲಾಡ್‌ ತಯಾರಿಸಿ ತಿನ್ನಿ

    ಬೇಸಿಗೆ ಬಂದ್ರೆ ಸಾಕು ಮನೆಯ ಹೊರಗಡೆನೂ ಹೋಗೋಕಾಗೋದಿಲ್ಲ ಮನೆಯ ಒಳಗಡೆನೂ ಇರೋಕಾಗೋದಿಲ್ಲ. ಬಿಸಿಲು, ಸಿಕ್ಕಾಪಟ್ಟೆ ಸೆಕೆ ಸಾಕಾಪ್ಪಾ ಸಾಕು ಅನ್ನುವಷ್ಟು ನಮ್ಮನ್ನ ಕಾಡೋದಕ್ಕೆ ಶುರು ಮಾಡುತ್ತೆ. ಇತ್ತ ಎಷ್ಟು ನೀರು ಕುಡಿದ್ರು ದಾಹ ತೀರೋದಿಲ್ಲ. ಈ ವರ್ಷ ಸೆಕೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಫ್ಯಾನ್‌ ಕೆಳಗಡೆ ಕೂತ್ರೂನೂ ಬೇವರು ಸುರಿಯುತ್ತೆ.

    ಇಂತಹ ಸಮಯದಲ್ಲಿ ನಮ್ಮನ್ನು ನಾವು ಆದಷ್ಟು ಹೈಡ್ರೇಟ್‌ ಆಗಿ ಇಡೋದು ಒಳ್ಳೆಯದು.

    ನಾವು ಸೇವಿಸೋ ಆಹಾರ ಪದಾರ್ಥಗಳು ಕೂಡ ನಮ್ಮ ದೇಹಕ್ಕೆ ಹಾಗೂ ಈ ಬಿಸಿಲಿಗೆ ಸರಿ ಹೊಂದುವ ಹಾಗಿರ್ಬೇಕು. ಹೀಗಾಗಿ ಈ ಬೇಸಿಗೆಯಲ್ಲಿ ಆದಷ್ಟು ಫ್ರೆಶ್‌ ಹಣ್ಣುಗಳನ್ನು ತಿನ್ನಿ. ಅದ್ರಲ್ಲೂ ಈ ಋತುಮಾನದಲ್ಲಿ ಲಭ್ಯವಾಗೋ ಹಣ್ಣುಗಳು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಸಾಮಾನ್ಯವಾಗಿ ಅನೇಕ ಜನ ಹಣ್ಣುಗಳನ್ನು ತಿನ್ನೋದಕ್ಕೆ ಇಷ್ಟ ಪಡೋದಿಲ್ಲ. ಇಂತಹ ಸಮಯದಲ್ಲಿ ಫ್ರೂಟ್‌ ಸಲಾಡ್‌ ತಯಾರಿಸಿ ಕೊಟ್ರೆ ಅನೇಕರಿಗೆ ತುಂಬಾನೇ ಇಷ್ಟವಾಗುತ್ತೆ. ಹಾಗಾದ್ರೆ ಯಾವ ರೀತಿಯ ಫೂಟ್‌ ಸಲಾಡ್‌ಗಳು ಈ ಬೇಸಿಗೆ ಕಾಲದಲ್ಲಿ ತಿನ್ನೋದಕ್ಕೆ ಚೆನ್ನಾಗಿರುತ್ತೆ ಅನ್ನೋದನ್ನ ತಿಳಿಯೋಣ.

    1. ಕಲ್ಲಂಗಡಿ ಹಣ್ಣಿನ ಸಲಾಡ್‌

    ಕಲ್ಲಂಗಡಿ ಹಣ್ಣು ಈ ರಣ ಬಿಸಿಲಿಗೆ ನಮ್ಮ ದೇಹವನ್ನು ಹೈಡ್ರೇಟ್‌ ಆಗಿರಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಈ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳೋದಕ್ಕೆ ಬೆಸ್ಟ್‌ ಹಣ್ಣು ಅಂದ್ರೆ ತಪ್ಪಾಗೋದಿಲ್ಲ. ಕಲ್ಲಂಗಡಿ ಹಣ್ಣಿನ ಜೊತೆಗೆ ದ್ರಾಕ್ಷಿ, ಸೇಬು, ಕುರ್ಬೂಜ, ಬಾಳೆಹಣ್ಣು ಜೊತೆಗೆ ಲಿಂಬೆಹುಳಿ ಹಾಗೂ ಜೇನು ತುಪ್ಪ ಸೇರಿಸಿ ಸೇವಿಸಬೇಕು.

    2. ಮಾವಿನ ಹಣ್ಣಿನ ಸಲಾಡ್‌

    ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಖಾರ ತಿನ್ನಬಾರದು ಅಂತಾರೆ ಆದರೆ ಅನೇಕರು ಈ ಆಹಾರಕ್ಕೆ ಒಗ್ಗಿಕೊಂಡಿರೋದ್ರಿಂದ ಸಪ್ಪೆ ಆಹಾರಗಳನ್ನು ಅವರು ಇಷ್ಟ ಪಡೋದಿಲ್ಲ. ಅಂತವರು ಖಾರ ಖಾರವಾಗಿ ಮಾವಿನ ಹಣ್ಣಿನ ಸಲಾಡ್‌ ಮಾಡ್ಕೊಬಹುದು. ಮಾವಿನ ಹಣ್ಣಿಗೆ ಸ್ವಲ್ಪ ಮೆಣಸಿನ ಪುಡಿ, ಈರುಳ್ಳಿ, ಸೌತೆಕಾಯಿ, ಹುರಿದ ಕಡಲೆ ಬೀಜ ಸೇರಿಸಿ ಫ್ರಿಡ್ಜ್‌ನಲ್ಲಿ ಸ್ವಲ್ಪ ಹೊತ್ತು ಇಟ್ಟು ಆಮೇಲೆ ತಿನ್ನಿ.

    3. ನೇರಳೆ ಹಣ್ಣಿನ ಸಲಾಡ್‌

    ಬೇಸಿಗೆ ಕಾಲದಲ್ಲಿ ಲಭ್ಯವಿರೋ ಮತ್ತೊಂದು ಹಣ್ಣು ಎಂದರೆ ಅದು ನೇರಳೆ ಹಣ್ಣು. ಇದು ಕೂಡ ಬೇಸಿಗೆಯ ಬಿಸಿಲನ್ನು ತಣಿಸಲು ಉತ್ತಮ ಹಣ್ಣು. ನೇರಳೆ ಹಣ್ಣಿನ ಜೊತೆಗೆ ಪ್ಲಮ್‌ ಹಣ್ಣು, ಸೌತೆಕಾಯಿ, ಅನಾನಾಸು, ಕಿವಿ, ದ್ರಾಕ್ಷಿ ಹಣ್ಣನ್ನು ಸೇರಿಸಿ ಹಣ್ಣಿನ ಸಲಾಡ್‌ ತಯಾರಿಸಿ ತಿಂದರೆ ತುಂಬಾನೇ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

    5. ಮಿಶ್ರ ಹಣ್ಣುಗಳ ಸಲಾಡ್‌ ತಯಾರಿಸಿ

    ಒಂದೇ ಹಣ್ಣನ್ನು ತಿನ್ನೋದ್ರ ಬದಲು ಹಲವಾರು ಹಣ್ಣುಗಳನ್ನು ಸೇರಿಸಿ ತಿಂದ್ರೆ ಚೆನ್ನಾಗಿರುತ್ತೆ. ಕಲ್ಲಂಗಡಿ, ಅನಾನಾಸು, ಕೀವಿ ಹಣ್ಣನ್ನು ಕ್ಯೂಬ್‌ ಆಕಾರದಲ್ಲಿ ತುಂಡರಿಸಿಕೊಳ್ಳಿ. ನಂತರ ಇದಕ್ಕೆ ಡ್ರೈ ಫ್ರೂಟ್ಸ್‌ ಕೂಡ ಸೇರಿಸಬಹುದು. ಆಮೇಲೆ ಜೇನು ತುಪ್ಪ ಸೇರಿಸಿ ತಿಂದರೆ ರುಚಿಯಾಗಿರುತ್ತೆ.

    ಈ ರೀತಿ ನಿಮಗೆ ಇಷ್ಟವಾದ ಹಣ್ಣುಗಳನ್ನು ಸೇರಿಸಿ ಫ್ರೂಟ್‌ ಸಲಾಡ್‌ ತಯಾರಿಸಿಕೊಳ್ಳಿ. ಸಿಹಿ ಅಥವಾ ಖಾರ ನಿಮಗೆ ಯಾವುದು ಇಷ್ಟ ಅದನ್ನು ಸೇರಿಸಿಕೊಂಡು ಫ್ರೂಟ್‌ ಸಲಾಡ್‌ ತಿಂದರೆ ಅದ್ಭುತವಾಗಿರುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss