ಮಂಗಳೂರು: ಸೈನಿಕನೆಂದು ನಂಬಿಸಿ ಹಿರಿಯ ನಾಗರಿಕರೊಬ್ಬರಿಗೆ 2.41 ಲಕ್ಷ ರೂ. ವಂಚಿಸಿರುವ ಆರೋಪದಲ್ಲಿ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ನಾಗರಿಕರು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ಬಾಡಿಗೆ ಕೊಡುವ ವಿಚಾರದಲ್ಲಿ ಒಂದ MAGIC BRICKನಲ್ಲಿ ಜಾಹೀರಾತು ನೀಡಿದ್ದರು. ಡಿಸೆಂಬರ್ 8ರಂದು ಅಪರಿಚಿತನೊಬ್ಬ ಇವರ ಮೊಬೈಲ್ ಫೋನ್‌ಗೆ ಕರೆ ಮಾಡಿ ತನ್ನ ಹೆಸರು ಆಶೀಶ್ ಕುಮಾರ್. ತಾನು ಭಾರತೀಯ ಸೇನೆಯಲ್ಲಿ ನೌಕರ ಎಂದು ಪರಿಚಯಿಸಿದ್ದಾನೆ. ಅಪಾರ್ಟ್ ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿದ್ದಾನೆ. ಬಳಿಕ ಬಾಡಿಗೆ ವಿಚಾರವಾಗಿ ವಿಚಾರಿಸಿ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಹಣ ಸಂದಾಯವಾಗುವುದಾಗಿ ತಿಳಿಸಿದ್ದಾನೆ. ಮೊದಲಿಗೆ 1/-ರೂ,5/-ರೂ ,49,999/-ರೂ ಮತ್ತು 49994/-ರೂಗಳ UPI CODE ಗಳನ್ನು ಅವರಿಗೆ ವಾಟ್ಸ್ಆ್ಯಪ್ ನಲ್ಲಿ ಕಳುಹಿಸಿದ್ದಾನೆ. ಇದನ್ನು ಸತ್ಯವೆಂದು ಭಾವಿಸಿ ಹಿರಿಯ ನಾಗರಿಕರು ತಮ್ಮ ಹೆಚ್ ಡಿ ಎಫ್ ಸಿ ಖಾತೆಯಿಂದ ಗೂಗಲ್ ಪೇ ಮುಖಾಂತರ ಡಿಸೆಂಬರ್ 8 ರಂದು 1,41,999 ರೂ. ಪಾವತಿಸಿದ್ದಾರೆ. ಡಿ.9 ರಂದು ಈ ಅಪರಿಚಿತ ಮತ್ತೊಮ್ಮೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಈ ಹಣ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದ್ದಾನೆ. ಅದೇ ರೀತಿ ಐಎಂಪಿಎಸ್ 1,00,000 ರೂ. ಹಣ ಪಾವತಿಸಿರುತ್ತಾರೆ. ಹೀಗೆ ಅಪರಿಚಿತನೊಬ್ಬ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿ ಯಲ್ಲಿ ನೌಕರನೆಂದು ನಂಬಿಸಿ ಆನ್ ಲೈನ್ ಮೂಲಕ 2,41,999 ರೂ.ವನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
©2021 Tulunada Surya | Developed by CuriousLabs