Sunday, September 15, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ರವರ ಹುಟ್ಟು ಹಬ್ಬ ಅಚರಣೆ

    ಉಡುಪಿ ತೆಂಕನಿಡಿಯೂರು ಪ್ರದೇಶದಲ್ಲಿ 10-10-2023 ರಂದು ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜರವರು ಉಡುಪಿ ತಾಲೂಕು ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿದರು. ಕಾರ್ಯಕರ್ತ ಬಂಧುಗಳು, ಪದಾಧಿಕಾರಿಗಳು, ಅಭಿಮಾನಿಗಳು, ಶುಭ ಹಾರಿಸಿದರು.

    ಶುಭ ಸಂದೇಶಗಳನ್ನು ಕಳುಹಿಸಿ ಹಾರೈಸಿದ ಪ್ರೀತಿಯ ಕಾರ್ಯಕರ್ತರಿಗೆ, ಮಿತ್ರರಿಗೆ, ಬಂಧುಗಳಿಗೆ, ಹಿತೈಷಿಗಳಿಗೆ ಹೃದಯಸ್ಪರ್ಶಿ ನಮನಗಳ ಸಲ್ಲಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿರವರು ಈ ಸಂದರ್ಭದಲ್ಲಿ ಇಸ್ರೇಲ್ ದೇಶದಲ್ಲಿ ಯುದ್ಧದ ಕರಿ ಮೋಡ ಮುಸುಕಿರುವುದು ಬಹಳ ವಿಷಾದನೀಯ. ಪವಿತ್ರ ಹಾಗೂ ಪೂಜಾನೀಯ ಸ್ಥಳವಾಗಿದ್ದು ಭಗವಾನ್ ಏಸುಕ್ರಿಸ್ತರ ಜೀವನ ಚರಿತ್ರೆಯ ಆಗರ ಆಗಿರುವ ಪವಿತ್ರ ಭೂಮಿಯಲ್ಲಿ ನಮ್ಮ ಊರಿನ ಹಲವು ಜನರು ತಮ್ಮ ಜೀವನೋಪಾಯಕ್ಕಾಗಿ ಹೋಗಿರುವರು. ಭಗವಂತನು ಎಲ್ಲರನ್ನು ಸುರಕ್ಷಿತವಾಗಿರಿಸಲಿ ಎಂದು ನಾವು ಒಕ್ಕೊರಲಿನಿಂದ ಪ್ರಾರ್ಥಿಸೋಣ ಎಂದರು.

    ಮುಖ್ಯ ಅಥಿತಿಯಾಗಿ ಆಗಮಿಸಿದ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ದೇವರು ಫ್ರ್ಯಾಂಕಿ ಡಿಸೋಜ ಕೊಳ್ಳಲಗಿರಿ ರವರಿಗೆ ಮುಂದಿನ ಜೀವನ ಸುಖಮಯವಾಗಲಿ ಎಂದು ಹಾರೈಸುತ್ತಾ ಜಗತ್ತು ಒಂದು ಕುಟುಂಬದ ಹಾಗೆ ಆದುದರಿಂದ ಇಸ್ರೇಲ್ ಮತ್ತು ಪ್ಯಾಲೇಸ್ಟಿನಿ ನಡುವೆ ಯುದ್ಧ ನಡೆಯುತ್ತಿರುವುದು ತುಂಬಾ ಬೇಸರ ಸಂಗತಿ ಆಗಿದೆ. ಹಲವಾರು ಪ್ರಾಣ ಹಾನಿ , ಕುಟುಂಬದ ಸದಸ್ಯರನ್ನು ಕಳೆದುಕೊಂಡ ಜನರ ದುಃಖ ಹೇಳಲು ಅಸಾಧ್ಯವಾಗಿದೆ. ಆದುದರಿಂದ ಸೃಷ್ಟಿಕರ್ತನು ಆದಷ್ಟು ಬೇಗ ಜಗತ್ತಿನಲ್ಲಿ ಶಾಂತಿ ನೆಲೆಸಿ ಸರ್ವರನ್ನು ಅಭಿವೃದ್ಧಿ ಮಾಡಲಿ ಎಂದು ಶುಭ ಹಾರೈಸಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಗೌರವ ಸಲೆಗಾರರಾಗಿರುವ ಸುಧಾಕರ್ ಅಮೀನ್ ಜಯರಾಮ್ ಪೂಜಾರಿ ನಾರಾಯಣ ಜತ್ತನ್ನ ಉಮೇಶ್ ಶೆಟ್ಟಿ ಶೋಭಾ ಪಂಗಲ ನಾಗಲಕ್ಷ್ಮಿ ಗುಣವತಿ ಸುನಂದ ನಂದನ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರ್ವಹಣೆಯನ್ನು ಹೆಲನ್ ಸೋನ್ಸ್ ರವರು ಮಾಡಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss