Friday, June 14, 2024
spot_img
More

  Latest Posts

  ನಾಪತ್ತೆಯಾಗಿದ್ದ ಬೆಳ್ತಂಗಡಿಯ ಯುವಕನ ಶವ ಉಳ್ಳಾಲದಲ್ಲಿ ಪತ್ತೆ..!

  ಉಳ್ಳಾಲ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳ್ತಂಗಡಿಯ ಮಚ್ಚಿನ ಗ್ರಾಮದ ನೇರಳಪಲ್ಕೆ ನಿವಾಸಿ ಯುವಕನ ಮೃತದೇಹ ಉಳ್ಳಾಲ ಉಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.ರಾಜೇಶ್ (38) ಮೃತದೇಹ ಇಂದು ಪತ್ತೆಯಾಗಿದ್ದು, ಇಂದು ನಸುಕಿನ ಜಾವ ಮೃತದೇಹ ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರಕ್ಕೆ ತೇಲಿಬಂದಿದ್ದು, ಉಳಿಯ ನಿವಾಸಿ ಪ್ರೇಮ್ ಪ್ರಕಾಸ್ ಡಿಸೋಜ ನೇತೃತ್ವದ ತಂಡ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು.ರಾಜೇಶ್ ಉಳ್ಳಾಲ ಸಮೀಪವೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss