Thursday, April 18, 2024
spot_img
More

  Latest Posts

  ಮಂಗಳೂರು: ಮಾದಕ ವಸ್ತು ಮಾರಾಟ ಮಾಡಿದ ಆರೋಪದಲ್ಲಿ ವಿದೇಶಿ ಪ್ರಜೆ ಅರೆಸ್ಟ್‌

  ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೆನ್ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

  ಮೂಲತಃ ರಿಪಬ್ಲಿಕ್ ಆಫ್ ಸೌತ್ ಸೂಡನ್‌ನ ಪ್ರಜೆ, ಹಾಲಿ ಬೆಂಗಳೂರು ನಗರದ ಗುಂಜೂರು ಪಾಳ್ಯದಲ್ಲಿ ವಾಸ್ತವ್ಯವಿದ್ದ ಲೂಯಲ್ ಡೇನಿಯಲ್ ಜಸ್ಟೀನ್ ಬೌಲೋ ಯಾನೆ ಡ್ಯಾನಿ ಬಂಧಿತ ಆರೋಪಿ.

  ಜೂನ್ 15ರಂದು ಸಿಸಿಬಿ ಪೊಲೀಸರು ಪಡೀಲ್ ಬಳಿ ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ದಸ್ತಗಿರಿ ಮಾಡಿತ್ತು. ಇವರಿಂದ 125 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.

  ತನಿಖೆ ಮುಂದುವರಿಸಿದ್ದ ಸೆನ್ ಪೊಲೀಸರು ಈ ಆರೋಪಿಗಳಿಗೆ ಮಾದಕ ವಸ್ತುವನ್ನು ಮಾರಾಟ ಮಾಡಿದ್ದ ಆರೋಪಿ ಡ್ಯಾನಿಯನ್ನು ಬೆಂಗಳೂರಿನಲ್ಲಿ ಇಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss