ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಮುಗೇರಡ್ಕ ಬಳಿ ನಡೆದಿದೆ.
ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40) ನೀರುಪಾಲಾದ ವ್ಯಕ್ತಿ.ಜನಾರ್ದನ ಹಾಗೂ ಮೊಗ್ರು ಗ್ರಾಮದ ಮಹೇಶ್ ಎಂಬವರು ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು.ಈ ವೇಳೆ ಜನಾರ್ದನ ಅವರು ನೀರು ಪಾಲಾಗಿದ್ದಾರೆ.
ಈ ವೇಳೆ ಮಹೇಶ್ ಯಾರಿಗೂ ಮಾಹಿತಿ ತಿಳಿಸದೆ ತೆರಳಿದ್ದ. ನಂತರ ಬಾರ್ ವೊಂದಕ್ಕೆ ತೆರಳಿದ್ದ ಮಹೇಶ್ ಅಲ್ಲಿದ್ದವರಲ್ಲಿ ಜನಾರ್ದನ ನೀರುಪಾಲಾದ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.
ಇದಕ್ಕೆ ಕೋಪಗೊಂಡ ಜನ ನೀರುಪಾಲಾಗಿರುವ ವಿಷಯ ತಕ್ಷಣವೇ ಹೇಳಿಲ್ಲ ಎಂದು ಮಹೇಶ್ ಗೆ ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ.
