Tuesday, September 17, 2024
spot_img
More

    Latest Posts

    ಗುಜರಾತ್‌ನ ಭರೂಚ್‌ನ ಪಟೇಲ್ ವೆಲ್ ಫೇರ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ

    ಭರೂಚ್: ಗುಜರಾತ್‌ನ ಭರೂಚ್ ಜಿಲ್ಲೆಯ ಪಟೇಲ್ ವೆಲ್ ಫೇರ್ ಆಸ್ಪತ್ರೆಯಲ್ಲಿ ದೊಡ್ಡ ಅಪಘಾತ ಸಂಭವಿಸಿದ್ದು, ತಡರಾತ್ರಿ ಸಂಭವಿಸಿದ ಈ ಅಗ್ನಿ ಅಪಘಾತದಲ್ಲಿ 16 ಜನರು ಸಜೀವ ದಹನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಕರೋನಾ ರೋಗಿಗಳಿಗಾಗಿ ನಿರ್ಮಿಸಲಾಗಿರುವ ಕೋವಿಡ್ ಕೇರ್ ಸೆಂಟರ್ (Covid care center) ನಲ್ಲಿ ತಡರಾತ್ರಿ 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು 16 ಕರೋನಾ ರೋಗಿಗಳು (Corona Patient) ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಶಾರ್ಟ್ ಸರ್ಕ್ಯೂಟ್
    ಅಪಘಾತದ ಬಗ್ಗೆ ಮಾಹಿತಿ ನೀಡಿರುವ ಭರೂಚ್ ಪೊಲೀಸರು, “ಪ್ರಾಥಮಿಕ ಮಾಹಿತಿಯ ಪ್ರಕಾರ, ಭರೂಚ್‌ನಲ್ಲಿ ತಡರಾತ್ರಿ 12: 30 ರ ಸುಮಾರಿಗೆ ಪಟೇಲ್ ವೆಲ್ಫೇರ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ (Covid care center) ನ ಐಸಿಯುನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ 16 ಜನರು ಸಾವನ್ನಪ್ಪಿದ್ದಾರೆ” ಎಂದು ಹೇಳಿದರು.

    ಈ ಬಗ್ಗೆ ಮಾಹಿತಿ ನೀಡಿರುವ ಭರೂಚ್ ಎಸ್ಪಿ ರಾಜೇಂದ್ರ ಸಿಂಗ್ ಚುಡಾಸಮಾ ಅವರು ಶಾರ್ಟ್ ಸರ್ಕ್ಯೂಟ್ನಿಂದ ಕೋವಿಡ್ ಆರೈಕೆ ಕೇಂದ್ರದ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಆದರೆ ನಂತರ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss