Friday, July 19, 2024
spot_img
More

  Latest Posts

  ಉಳ್ಳಾಲ: ಬಾಡಿಗೆ ಮನೆಗೆ ಬೆಂಕಿ- ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಯೋಗೀಶ್‌ ಶೆಟ್ಟಿ ಜಪ್ಪು ಒತ್ತಾಯ

  ಉಳ್ಳಾಲ: ಉಳ್ಳಾಲದ ವಿದ್ಯಾರಣ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶಾಲಿನಿ ಸೌಮ್ಯಲತಾ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಲಕ್ಷಾಂತರ ರೂ. ನಷ್ಟವಾಗಿರುತ್ತದೆ.
  ಜು.23 ರಂದು ಬೆಳಗ್ಗಿನ ಜಾವ ಶಾಲಿನಿ ಸೌಮ್ಯಲತಾ ಹಾಗೂ ಅವರ ಮಗ ರೋನ್ ಸ್ಟನ್‌ ಡೆಂಝಿಲ್‌ ಐಮಾನ್‌ ಮಲಗಿದ್ದ ಸಮಯದಲ್ಲಿ ಮತ್ತೊಂದು ಬೆಡ್‌ ರೂಂ ನಿಂದ ಬೆಂಕಿ ಕಂಡುಬಂದಿದೆ.
  1 ಲಕ್ಷ ರೂ. ನಗದು ಸೇರಿದಂತೆ ಟೈಲರಿಂಗ್‌ ಮಿಷನ್‌, ಮೊಬೈಲ್‌ ಫೋನ್‌ ಹಾಗೂ ಮರದ ಸಲಕರಣಗಳು ಸೇರಿದಂತೆ ಮತ್ತಿತರ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು,ಸುಮಾರು 7.50ಲಕ್ಷ ರೂ. ನಷ್ಟ ಸಂಭವಿಸಿದೆ.


  ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss