Sunday, November 3, 2024
spot_img
More

    Latest Posts

    ಗ್ರಾನೈಟ್ ಮೈ ಮೇಲೆ ಬಿದ್ದು ಮೃತ ಪಟ್ಟ ಕಾರ್ಮಿಕರಿಗೆ ಕೂಡಲೇ 25 ಲಕ್ಷ ಪರಿಹಾರ ನೀಡಿ ನಿರ್ಲಕ್ಷ ತೋರಿ ಸಾವಿಗೆ ಕಾರಣ ವಾದ ಸಂಬಂಧಪಟ್ಟ ಸಂಸ್ಥೆ ಮೇಲೆ ಸೂಕ್ತ ಕಾನೂನು ಕ್ರಮಗೊಳ್ಳಿ– ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ಒತ್ತಾಯ

    ಉಡುಪಿ: ಕಂಟೇನರ್ ಲಾರಿಯಲ್ಲಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಖಂಡಿಸಿ ಇಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ವತಿಯಿಂದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿರವರನ್ನ ಭೇಟಿ ನೀಡಿ ಮೃತ ಪಟ್ಟ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು.

    ಗ್ರಾನೈಟ್ ಮೈ ಮೇಲೆ ಬಿದ್ದ ಕಾರ್ಮಿಕರಿಗೆ ಕೂಡಲೇ ಪರಿಹಾರ ಒದಗಿಸಿ ಹಾಗೂ ನಿರ್ಲಕ್ಷ ತೋರಿದ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ಒತ್ತಾಯಿಸಿದರು.

    ಮೃತಪಟ್ಟ ಕಾರ್ಮಿಕರಿಗೆ PF ಮತ್ತು ESI ನೊಂದಣಿ ಮಾಡಿದ್ದಾರೆಯೇ…? ಕಾರ್ಮಿಕರ ಗುರುತು ಕಾರ್ಡ್ ಹೊಂದಿದರೆಯೇ.. ? ಅಂತರಾಜ್ಯ ವಲಸೆ ಕಾರ್ಮಿಕ ಕಾಯಿದೆ ನಿಯಮ ಪಾಲಿಸಲಾಗಿದೆಯೇ ?
    ಎಂದು ಸೂಕ್ತ ತನಿಖೆ ನಡೆಸಿ ನಿರ್ಲಕ್ಷ ತೋರಿದ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರಗಿಸಬೇಕು. ಮತ್ತು ಹಲವು ವರ್ಷಗಳಿಂದ ನೂರಾರು ಕಾರ್ಮಿಕರ ಸಾವು ನಡೆಯುತ್ತಿದ್ದರೂ ಸಂಬಂಧ ಪಟ್ಟ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾರ್ಮಿಕ ಕಾನೂನು ಮತ್ತು ಕಾರ್ಮಿಕರ ಹಕ್ಕುಗಳನ್ನು ಸರಿಯಾಗಿ ಜಾರಿಗೆ ತರುವಲ್ಲಿ ವಿಫಲವಾಗಿ ಪರೋಕ್ಷವಾಗಿ ಕಾರ್ಮಿಕರ ಸಾವಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಲಕ್ಷ ಮತ್ತು ಕರ್ತವ್ಯ ಲೋಪ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಹೋರಾಟ ನಡೆಸುವುದು ಅನಿವಾರ್ಯ ವಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ಒತ್ತಾಯಿಸಿದೆ.

    ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ, ತಾಲೂಕು ಅದ್ಯಕ್ಷರಾದ ಕೃಷ್ಣ ಕುಮಾರ್ , ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಉಮೇಶ್ ಶೆಟ್ಟಿ ಹಾವಂಜೆ, ಸುನಂದ ಟೀಚರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss