ಜೆಸಿಐ ಜೋಡುಮಾರ್ಗ ನೇತ್ರಾವತಿ, ವಿಜಯಶ್ರೀ ಚಿಕಿತ್ಸಾಲಯ ಮೊಗರ್ನಾಡು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ( ಅಂಧತ್ವ ವಿಭಾಗ)ಮಂಗಳೂರು, ಡಾ. ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ) ಸೆಂಚುರಿ ಗ್ರೂಪ್ಸ್ ಬೆಂಗಳೂರು. ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗು ಚಿಕಿತ್ಸಾಶಿಬಿರ ಮತ್ತು ನೇತ್ರದಾನ ನೋಂದಾವಣೆ ಕಾರ್ಯಕ್ರಮವು ದಿನಾಂಕ 25-06-2023 ನೇ ಆದಿತ್ಯವಾರ ಸಮಯ- ಬೆಳಗ್ಗೆ 9.30 ರಿಂದ 1.00 ರವರೆಗೆ ನರಿಕೊಂಬು ಮೊಗರ್ನಾಡು ಅನ್ನಪೂರ್ಣ ಸಭಾಭವನದಲ್ಲಿ ನಡೆಯಲಿರುವುದು. ಸಭಾ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊಗರ್ನಾಡುವಿನ
ಮೊಕ್ತೇಸರರಾದ ವೇದಮೂರ್ತಿ ಜನಾರ್ದನ ಭಟ್ ಮೊಗರ್ನಾಡು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ : ಶ್ರೀ ಕಮಲಾಕ್ಷ ಕಲ್ಲಡ್ಕ ಮುಖ್ಯ ಶಿಕ್ಷಕರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು. ಡಾ. ಸುಬ್ರಹ್ಮಣ್ಯ ಭಟ್ ವಿಜಯಶ್ರೀ ಚಿಕಿತ್ಸಾಲಯ ಮೊಗರ್ನಾಡು ಹಾಗು ವೈದ್ಯಾಧಿಕಾರಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೇಸಿಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ JFD. ಗಾಯತ್ರಿ ಲೋಕೇಶ್ ವಹಿಸಲಿದ್ದಾರೆ.
ಶಿಬಿರದ ವಿಶೇಷತೆಗಳು
• ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು
• ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು
• ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ವಾಪಾಸು ಮೊಗರ್ನಾಡು ಗೆ ತಲುಪಿಸಲಾಗುವುದು
• ಅಗತ್ಯವುಳ್ಳವರಿಗೆ ಕನ್ನಡಕವನ್ನು ರಿಯಾಯತಿ ದರದಲ್ಲಿ ವಿತರಿಸಲಾಗುವುದು.
ಶಿಬಿರದಲ್ಲಿ ಉಚಿತ ಮಧುಮೇಹ ತಪಾಸಣೆ, ರಕ್ತದೊತ್ತಡ ಹಾಗು ಮೂಳೆ ಸಾಂದ್ರತೆ ತಪಾಸಣೆ ಕೂಡಾ ನಡೆಯಲಿರುವುದು.
ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.
