Tuesday, February 20, 2024
spot_img
More

  Latest Posts

  ಬೆಳ್ತಂಗಡಿ: ವಿಪರೀತ ಜ್ವರ- ಸಹೋದರಿಬ್ಬರು ಸಾವು

  ಬೆಳ್ತಂಗಡಿ: ಜ್ವರದಿಂದ ಸಹೋದರರಿಬ್ಬರು 24 ಗಂಟೆಗಳ ಅವಧಿಯಲ್ಲಿ ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಲಾಡಿ ಎಂಬಲ್ಲಿ ನಡೆದಿದೆ.

  ಸಫ್ವಾನ್ ಮತ್ತು ಸಿನಾನ್ ಮೃತ ಮಕ್ಕಳಾಗಿದ್ದಾರೆ. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಮನೆಯಲ್ಲೇ ಇದ್ದ ಮದ್ದು ನೀಡುತ್ತಿದ್ದು, ಎಷ್ಟೇ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಿರಲಿಲ್ಲ. ಜ್ವರ ಉಲ್ಬಣಗೊಂಡ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಒಂದು ಮಗು ನಿನ್ನೆ ಮಧ್ಯಾಹ್ನ ಮೃತಪಟ್ಟರೆ ಮತ್ತೊಂದು ಮಗು ಇಂದು ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss