ಮಂಗಳೂರು: ಎಮ್ಮೆಕೆರೆ ಮೈದಾನಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯ ಶೀಘ್ರವಾಗಿ ಮಾಡುವಂತೆ ಬೇಡಿಕೆ ಇಟ್ಟುಕೊಂಡು ಎಮ್ಮೆಕೆರೆ ಮೈದಾನ ಉಳಿಸಿ ಹೋರಾಟ ಸಮಿತಿ ನಾಳೆ ನವೆಂಬರ್ 19ರಂದು ನಡೆಸಲು ಉದ್ದೇಶಿಸಿದ ಬೃಹತ್ ಪ್ರತಿಭಟನೆಯನ್ನು ಇಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೇಡಿಕೆ ಈಡೇರಿಸಿದ್ದರಿಂದ ಬೃಹತ್ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಳ್ಳಲಾಗಿದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆದ ಶ್ರೀಮಾನ್ ಯು ಟಿ ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕರೆದು ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರ ಮುಂದೆ ಸದರಿ ಮೈದಾನದ ಅಭಿವೃದ್ಧಿಗೆ ಎರಡು ಕೋಟಿ ಹಣವನ್ನು ಮೀಸಲಾಗಿಟ್ಟ ಬಗ್ಗೆ ಮತ್ತು ಮೈದಾನ ಅಭಿವೃದ್ಧಿ ಡಿಸೆಂಬರ್ ಆರರಿಂದ ಆರಂಭಿಸುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಾರ್ವಜನಿಕವಾಗಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಸ್ಥಳೀಯರಿಗೂ ಕೂಡ ಈಜುಕೊಳದಲ್ಲಿ ತರಬೇತಿ ನೀಡುವಂತೆ ಸ್ಮಾರ್ಟ್ ಅಧಿಕಾರಿಗಳಿಗೆ ತಿಳಿಸಿದರು. ಇದಲ್ಲದೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಕೂಡ ಮೈದಾನದ ಅಭಿವೃದ್ಧಿಗೆ ಅವರು ಕೊಟ್ಟ ಮಾತಿನಂತೆ ನಡೆಸಿಕೊಡುವುದಾಗಿ ಸಾರ್ವಜನಿಕರಿಗೆ ದೂರವಾಣಿ ಕರೆ ಮಾಡಿ ಭರವಸೆ ನೀಡಿದರು. ಅಲ್ಲದೆ ಮೇಯರ್ ಸುಧೀರ್ ಶೆಟ್ಟಿ ರವರು ಕರೆ ಮಾಡಿ ಮೈದಾನದ ಸಂಪೂರ್ಣ ಅಭಿವೃದ್ಧಿ ವಿಚಾರದಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕರ ಪರವಾಗಿದೆ ಎಂದು ಭರವಸೆ ಕೊಟ್ಟರು.
ಮಾನ್ಯ ಸ್ಪೀಕರ್ ಅವರು ಭೇಟಿ ನೀಡಿದ ಸಂದರ್ಭ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರು, ಪೋಲಿಸ್ ಅಧಿಕಾರಿಗಳು,ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಸದಾಶಿವ ಉಳ್ಳಾಲ್ ರವರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ದಿನಕರ್ ಶೆಟ್ಟಿಯವರು ಸ್ಪೀಕರ್ ಅವರಿಗೆ ಸಮಸ್ಯೆ ಬಗೆಹರಿಸುವುದಕ್ಕೆ ಸಾರ್ವಜನಿಕವಾಗಿ ಕೃತಜ್ಞತೆ ಸಲ್ಲಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಯೋಗೇಶ್ ಶೆಟ್ಟಿ ಜಪ್ಪು ಮತ್ತು ಸಮಿತಿಯ ನಾಯಕರಾದ ಅಮಿತ್ ಎಮ್ಮೆಕೆರೆ, ಹರ್ಷಿತ್ ಎಮ್ಮೆಕೆರೆ, ಸಮದ ಎಮ್ಮೆಕೆರೆ, ಜಾಕೀರ್, ಪ್ರಜ್ವಲ್ ಬೋಳಾರ ,ದೀಕ್ಷಿತ್ ಅತ್ತಾವರ, ರಮಾನಂದ ಬೋಳಾರ, ದಿನೇಶ್ ಶಿವನಗರ, ಜೋನ್ ನೊರೊನಾ, ರಮೇಶ್, ನೌಶಾದ್, ನಝೀರ್, ಫಿರೋಜ್, ಗೌತಮ್, ಸಾತ್ವಿಕ್, ವೈಷ್ಣವ್, ಮಹೇಶ್, ಸಚಿನ್ ಸುಭಾಷ್ ನಗರ, ರಕ್ಷಿತ್ ಸುಭಾಷ್ ನಗರ ಮತ್ತು ಅನೇಕ ಸ್ಥಳಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಸ್ಥಳೀಯ ಸಂಘಟನೆಗಳಿಗೂ ವು ಮತ್ತು ಸ್ಥಳೀಯ ಜನರಿಗೆ ಹೋರಾಟ ಸಮಿತಿ ಸದಾ ಅ ಬಾರಿಯಾಗಿರುತ್ತದೆ. ಹೋರಾಟಕ್ಕೆ ಬೆಂಬಲ ನೀಡಿದ ಮಾಧ್ಯಮ ಮಿತ್ರರಿಗೂ ಸಮಿತಿ ಧನ್ಯವಾದಗಳು ಅರ್ಪಿಸುತ್ತಿದೆ.