Monday, July 15, 2024
spot_img
More

  Latest Posts

  ಮಿಠಾಯಿ ತಿಂದ ಇಬ್ಬರು ಸಹೋದರಿಯರು ನಿಗೂಢವಾಗಿ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

  ಕೌಶಂಬಿ: ಗುರುವಾರ ಬೆಳಗ್ಗೆ ಮಿಠಾಯಿ ತಿಂದ ಒಂದೇ ಕುಟುಂಬದ ನಾಲ್ವರು ಬಾಲಕಿಯರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾದಾಗ, ಮೂವರನ್ನು ಪ್ರಯಾಗರಾಜ್‌ನಲ್ಲಿರುವ ಸರೋಜಿನಿ ನಾಯ್ಡು ಬಾಲ ಚಿಕಿತ್ಸಾಲಯಕ್ಕೆ (ಮಕ್ಕಳ ಆಸ್ಪತ್ರೆ) ದಾಖಲಿಸಲಾಯಿತು.

  ಅಲ್ಲಿ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

  ಅಕ್ಕಪಕ್ಕದ ಯುವಕರು ಟಾಫಿಯಲ್ಲಿ ವಿಷ ಬೆರೆಸಿ ತಿನ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
  ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.

  ಕುಟುಂಬ ಸದಸ್ಯರೊಂದಿಗೆ ಟೆರೇಸ್ ಮೇಲೆ ಮಲಗಿದ್ದ ಮಗಳು ವರ್ಷಾ(7) ಗುರುವಾರ ಬೆಳಗ್ಗೆ ಎದ್ದು ನೋಡಿದಾಗ ಬೆಡ್ ಬಳಿ ಮಿಠಾಯಿ ಪತ್ತೆಯಾಗಿದೆ. ಅವಳು ಮಿಠಾಯಿಇನ್ನು ತನ್ನ ಸೋದರ ಸಂಬಂಧಿ ಆರುಷಿ (4), ಸಾಧನಾ (7) ಮತ್ತು ಶಾಲಿನಿ (8) ಜೊತೆ ಹಂಚಿಕೊಂಡು ತಿಂದಿದ್ದಾಳೆ. ಸ್ವಲ್ಪ ಸಮಯದ ನಂತರ ನಾಲ್ವರೂ ವಾಂತಿ ಮಾಡಲು ಪ್ರಾರಂಭಿಸಿದರು.

  ತರಾತುರಿಯಲ್ಲಿ ಮನೆಯವರೆಲ್ಲರೊಡನೆ ಅವರನ್ನು ಆಸ್ಪತ್ರೆಗೆ ಸೇರಿಸಿದೆ. ಆದ್ರೂ ಇಬ್ಬರು ಬಾಲಕಿಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss