Saturday, July 27, 2024
spot_img
More

    Latest Posts

    ಮಂಗಳೂರು: ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡಲು ಹೋಗಿ 8.78 ಲಕ್ಷ ರೂ. ಕಳಕೊಂಡ ವ್ಯಕ್ತಿ..!

    ಮಂಗಳೂರು: ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡಲು ಹೋಗಿ ವಂಚನೆಗೊಳಗಾಗಿ ವ್ಯಕ್ತಿಯೊಬ್ಬರು 8.78 ಲಕ್ಷ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಠಾಣೆಗೆ ದೂರು ದಾಖಲಿಸಿದ್ದಾರೆ ದೂರುದಾರ ವ್ಯಕ್ತಿಯ ವಾಟ್ಸ್ಆ್ಯಪ್ ಗೆ ಅಪರಿಚಿತ ವ್ಯಕ್ತಿಯ +447468726354 ದೂರವಾಣಿ ಸಂಖ್ಯೆಯಿಂದ . ಮಾ.13ರಂದು ಪಾರ್ಟ್‌ ಟೈಂ ಉದ್ಯೋಗದ ಸಂದೇಶ ಬಂದಿತ್ತು. ಬಳಿಕ ಟಾಸ್ಕ್ ನೀಡಿದ ಅಪರಿಚಿತ 100 ರೂ. ಪಾವತಿಸಲು ಸೂಚಿಸಿದ್ದ. ಅದರಂತೆ ದೂರುದಾರ ತಮ್ಮ ಫೋನ್ ಪೇಯಿಂದ ಹಣ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 8 ಟಾಸ್ಕ್ ಮಾಡುವಂತೆ ಸೂಚಿಸಿ ವಿವಿಧ ಬ್ಯಾಂಕ್‌ಗಳಿಗೆ ಹಂತ ಹಂತವಾಗಿ 4,25,068 ರೂ. ವರ್ಗಾಯಿಸಿಕೊಂಡಿದ್ದ. ಆ ಬಳಿಕ ಅಪರಿಚಿತ ಬಜಾಜ್ ಲೋನ್‌ನ ಆಫರ್ ನೀಡಿ ಪ್ರೋಸೆಸ್ ಚಾರ್ಜಸ್, ಟಿಡಿಎಸ್, ಜಿಎಸ್‌ಟಿ, ಬ್ಯಾಂಕ್ ಸೆಕ್ಯುರಿಟಿ ಡಿಪಾಸಿಟ್ ಎಂಬುದಾಗಿ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಮತ್ತೆ 4,53,638 ರೂ.ವನ್ನು ವರ್ಗಾಯಿಸಿದ್ದಾನೆ. ಈ ಮೂಲಕ ಒಟ್ಟು 8,78,706 ರೂ.ಗಳನ್ನು ಮಾ.13ರಿಂದ ಎ.3ರ ಅವಧಿಯಲ್ಲಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss