Friday, July 19, 2024
spot_img
More

  Latest Posts

  ಬೆಂಗಳೂರು: ಮೇಲಾಧಿಕಾರಿಗಳ ಕಿರುಕುಳ-ವೈದ್ಯರು ಆತ್ಮಹತ್ಯೆ..!

  ಬೆಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಯಾಗಿದ್ದ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಡಾಕ್ಟರ್ ಮೃತದೇಹ ಪತ್ತೆಯಾಗಿದೆ.

  ಮೃತ ನಟರಾಜ್ ಅವರು ಕಳೆದ ಮೂರು ತಿಂಗಳ ಹಿಂದೆ ಮಂಡ್ಯ ಜಿಲ್ಲೆಗೆ ಟ್ರಾನ್ಸ್ಫರ್ ಆಗಿದ್ದರು. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ನಟರಾಜ್ ರಜೆಯಲ್ಲಿದ್ದರು. ರಜೆ ಮುಗಿಸಿ ಇವತ್ತು ಡ್ಯೂಟಿಗೆ ಹಾಜರಾಗಬೇಕಿದ್ದ ನಟರಾಜ್ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಡಾಕ್ಟರ್ ನಟರಾಜ್ ಅವರು ಕುಣಿಗಲ್ ಮೂಲದವರಾಗಿದ್ದು, ಓರ್ವ ಹೆಣ್ಣು ಮಗಳು, ಪತ್ನಿ ಇದ್ದಾರೆ. ಮಾನಸಿಕವಾಗಿ ಸಾಕಷ್ಟು ಡಿಸ್ಟರ್ಬ್ ಆಗಿದ್ದ ನಟರಾಜ್ ಅವರು ಈ ಹಿಂದೆಯೂ ಕೂಡ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದರಂತೆ.

  ಮಂಡ್ಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಆಗಿರುವ ನಟರಾಜ್ ಅವರು ಮೇಲಾಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

  ಮಹಾಲಕ್ಷ್ಮಿ ಲೇ ಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss