ಇಂದು 08-12-2023 ರಂದು ಸಂಜೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಶ್ರೀಮತಿ ವಿಧ್ಯಾಕುಮಾರಿಯವರ ಕಚೇರಿಗೆ ತೆರಳಿ ಆಯುಷ್ ವೈದ್ಯರುಗಳು ಅನುಭವಿಸುತ್ತಿರುವ ಮಾನಸಿಕ ಹಿಂಸೆ ಮತ್ತು ಮಾನಹಾನಿ ಕುರಿತು ಮನವಿ ಸಲ್ಲಿಸಿದರು.
ಕಿರಣ್ ಪೂಜಾರಿಯವರು ವಿವಿಧ ಹೆಸರಿನಲ್ಲಿ ಜಾಲತಾಣದ ಡಿಜಿಟಲ್ ಮಾಧ್ಯಮವನ್ನು ಸೃಷ್ಟಿಸುದಲ್ಲದೆ ಸುಳ್ಳು ದೂರನ್ನು ಹಾಗೂ ವಿಡಿಯೋಗಳನ್ನು ಹರಿಯಬಿಡುತ್ತಿದ್ದು ವೈದ್ಯರ ಮಾನಹಾನಿ ಮಾಡುತ್ತಿದ್ದು ಆತನ ವಿರುದ್ದ ಪ್ರಕರಣವನ್ನು ದಾಖಲಿಸಿ ವೈದ್ಯರುಗಳಿಗೆ ರಕ್ಷಣೆ ನೀಡಬೇಕಾಗಿ ಒತ್ತಾಯಿಸಿದರು.
ಕೋವಿಡ್ 19 ತುರ್ತು ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆಗಳನ್ನು ಒದಗಿಸಿ ಶ್ಲಾಘನಾರ್ಹ ಸ್ಪಂದನೆಯನ್ನು ತೋರಿರುವ ವೈದ್ಯರುಗಳ ನೈತಿಕ ಸ್ಥೈರ್ಯ ವನ್ನು ಕೆಡಿಸುವ ದುರುದ್ದೇಶದಿಂದ ಇಂತಹ ಕೃತ್ಯದಲ್ಲೀತನು ತೊಡಗಿರುವುದು ಖಂಡನೀಯವಾಗಿದೆ.
ಕಿರಣ್ ಪೂಜಾರಿಯು ನೀಡುವ ಕಪೋಲಕಲ್ಪಿತ ಹಾಗೂ ಆಧಾರ ರಹಿತ ಸುಳ್ಳು, ಅರ್ಜಿಗಳನ್ನು ಎಫ್ ಐ ಆರ್ ಎಂದು ತಪ್ಪಾಗಿ ದಾಖಲಿಸಿ ಆರೋಗ್ಯಾಧಿಕಾರಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದು ವಿಷಾದನೀಯ, ತನ್ನ ಆರೋಪಗಳಿಗೆ ಯಾವುದೇ ಪೂರಕವಾದ ಸತ್ಯಾಂಶಗಳನ್ನು / ವಾಸ್ತವಾಂಶಗಳನ್ನು ನೀಡದ, ದಾಖಲೆಗಳನ್ನೇ ಸಲ್ಲಿಸದ, ಮೇಲ್ನೋಟದ ಸಾಕ್ಷಾಧಾರಗಳನ್ನೂ ಸಹ ನೀಡದೆ ಈತ ನೀಡುವ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಎಫ್ ಐ ಆರ್ ನ್ನು ದಾಖಲಿಸಿದ್ದಾರೆಂದು ಸುಳ್ಳು, ದೂರನ್ನು ವೈದ್ಯರ ಹೆಸರು ಹಾಗು ಛಾಯಾಚಿತ್ರವನ್ನು ಪ್ರಕಟಿಸಿ ಪಸರಿಸುತ್ತಿರುವುದು ವೈದ್ಯ ಸಮುದಾಯಕ್ಕೆ ನೋವನ್ನುಂಟುಮಾಡಿದೆ. ಮಾನಹಾನಿಯಿಂದಾಗಿ ಯಾವುದೇ ವೈದ್ಯರು ಪ್ರಾಣ ಕಳೆದುಕೊಂಡರೇ ಅದಕ್ಕೆ ಕಿರಣ್ ಪೂಜಾರಿ ಮತ್ತು ಅವನಿಗೆ ಬೆಂಬಲಿಸುವ ವ್ಯಕ್ತಿಗಳೇ ಕಾರಣ ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ಅದ್ಯಕ್ಷರಾದ ಡಾ. ರವೀಂದ್ರ ಸೇರಿದಂತೆ ಇತರ ವೈದ್ಯರು ನಮ್ಮ ನೋವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ಮುಖಂಡರುಗಳಾದ ಡಾ. ಎನ್ .ಟಿ ಅಂಚನ್, ಡಾ. ರಾಜೇಶ್ ಶೆಟ್ಟಿ, ಡಾ.ಪ್ರಜಿತ್ ನಂಬಿಯಾರ್, ಡಾ. ಸಂದೀಪ್ ಸನಿಲ್, ಡಾ. ಜಯ ಮೋಹನ್ ನಂಬಿಯಾರ್, ಡಾ. ಸುರೇಶ್ ಕುಮಾರ್ ಶೆಟ್ಟಿ ,ಡಾ. ಪ್ರಕಾಶ್ ಪೈ ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಕೃಷ್ಣರಾವ್ , ಡಾ. ಸುದೀಪ್ ಗಜಾನನ್ ಹೆಗಡೆ, ಡಾ. ವಿಶ್ವನಾಥ್ ಶೆಟ್ಟಿ, ಡಾ. ಅರುಣ್ ಕುಮಾರ್ ಶೆಟ್ಟಿ, ಡಾ. ವರುಣ್ ಪಿ ನಂಬಿಯಾರ್, ಡಾ. ಪ್ರಣಂ ಶೆಟ್ಟಿ, ಡಾ. ಸಂದೀಪ್ ಶೆಟ್ಟಿ, ಡಾ. ಶ್ರೇಯಸ್ ಕುಮಾರ್, ಡಾ. ಸತೀಶ್ ರಾವ್, ಡಾ. ವೆಂಕಟೇಶ್ ಶೆಟ್ಟಿ, ಡಾ. ರಾಘವೇಂದ್ರ ಶೆಟ್ಟಿ, ಡಾ. ಸುಕ್ರತಿ ರಾಘವೇಂದ್ರ, ಡಾ. ಕೌಶಿಕ್ ಐತಾಳ್, ಡಾ. ಹರ್ಷವರ್ಧನ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಲಕ್ಷ್ಮಿ ನಾರಾಯಣ ಶೆಟ್ಟಿ, ಡಾ. ದೇವದಾಸ್ ಶೆಟ್ಟಿ, ಡಾ. ಸುನಿಲ್ ಕುಮಾರ್ , ಡಾ. ಅನ್ನೋ ಪೂಜಾರಿ, ಡಾ. ಅನ್ನಪೂರ್ಣ , ಡಾ. ಗುರುಪ್ರಸಾದ್ , ಡಾ. ಗೌರವ್ ದೀಪಕ್ ಶೆಟ್ಟಿ , ಡಾ.ಗುರುಮೂರ್ತಿ, ಡಾ. ಕಲಾ ಹೆಬ್ಬಾರ್, ಡಾ. ಶಿವಶಂಕರ್ ಶ್ರೀಪತಿ ಭಟ್ , ಡಾ. ರಾಜ್ ಗೋಪಾಲ್ , ಡಾ. ವೆಂಕಟ ಕಿಷ್ಣ ಭಟ್ , ಡಾ. ನಾಗೇಂದ್ರ ಅಶೋಕ್ ಕುಮಾರ್ , ಡಾ. ರಾಘವೇಂದ್ರ ಉಪಾಧ್ಯಾಯ, ಡಾ. ರಮೇಶ್ ಕಲ್ಕೂರ್ , ಡಾ. ಸೌಮ್ಯಶ್ರೀ ಪ್ರವೀಣ್ ನಾಗರಾಜ್, ಡಾ. ಶಶಿಕಿರಣ್ ಶೆಟ್ಟಿ, ಡಾ. ಅಶ್ವಿನ್ ಕುಮಾರ್ , ಡಾ. ಗೋಪಾಲಕೃಷ್ಣ , ಡಾ. ರೋಹಿತ್ ಶೆಟ್ಟಿ , ಡಾ. ಅಭಿನವ ಶೆಟ್ಟಿ , ಡಾ. ಹರಿಪ್ರಸಾದ್ ಶೆಟ್ಟಿ, ಡಾ. ಶ್ರೀ ಪಾದ್ ಹೆಗ್ಡೆ ಹಾಗೂ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ, ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ಮಹಿಳಾ ಅಧ್ಯಕ್ಷೇ ಶೋಭಾ ಪಾಂಗಾಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಸಾಧನ, ಗುಣವತಿ, ಗೈಟನ್ ಮತ್ತಿತರರು ಉಪಸ್ಥಿತರಿದ್ದರು