ಮಂಗಳೂರು: ನಾಗರಹಾವಿಗೆ ಡೀಸೆಲ್ ಎರೆಚಿದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರಹಾವೊಂದು ಕಾಣಿಸಿಕೊಂಡಿತ್ತು.
ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಹಾವಿಗೆ ಡೀಸೆಲ್ ಎರೆಚಿದ್ದ. ಉರಿಯಿಂದ ನಾಗರಹಾವು ಒದ್ದಾಡಿತ್ತು. ಸ್ಥಳೀಯರು ಹಾವಿನ ಕುರಿತು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ತಿಳಿಸಿದ್ದು, ಅವರು ಹಾವಿಗೆ ಶಾಂಪೂ ಮೂಲಕ ತೊಳೆದು ಸಹಜ ಸ್ಥಿತಿಗೆ ಬಂದ ಬಳಿಕ ಮರಳಿ ಕಾಡಿಗೆ ಬಟ್ಟಿದ್ದರು. ಒಂದು ವಾರದ ಬಳಿಕ ಡೀಸೆಲ್ ಎರಚಿದ ಕಾರ್ಮಿಕ ಅದೇ ರೀತಿ ಮೈ ಉರಿಯಿಂದ ಆಸ್ಪತ್ರೆಗೆ ದಾಖಲಾಗುವಂತಾಗಿದೆ.