ಮಂಗಳೂರು: ಕೆಥೋಲಿಕ್ ಕ್ರಿಸ್ತಿಯನ್ನರ ನಡುವೆ ‘’ಬ್ಯಾಟಿ ಬ್ರದರ್’’ ಎಂದೇ ಹೆಸರಾಗಿದ್ದ ಫಾದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಅವರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಜಾನ್ ರೋಡ್ರಿಗಸ್ ಮತ್ತು ಕೋಸೆಸ್ ರೋಡ್ರಿಗಸ್ ದಂಪತಿಯ ಏಳು ಮಕ್ಕಳಲ್ಲಿ ಬ್ಯಾಪ್ಟಿಸ್ಟ್ ಒಬ್ಬರು. 1963ರಲ್ಲಿ ಕೇರಳದ ಅಲುವಾದಲ್ಲಿ ಕಾರ್ಮೆಲೈಟ್ ಸಂಸ್ಥೆ ಸೇರಿದ್ದ ಅವರು ಮಾರ್ಚ್ 19, 1969ರಂದು ತಮಿಳುನಾಡಿನ ಪೋದನೂರಿನಲ್ಲಿ ವೃತ್ತಿಬದುಕಿಗೆ ಪಾದಾರ್ಪಣೆ ಮಾಡಿದ್ದರು. 1974ರಲ್ಲಿ ದೀಕ್ಷೆ ಪಡೆದಿದ್ದರು. ಮೈಸೂರಿನ ಪುಷ್ಪಾಶ್ರಮ, ಮಂಗಳೂರು ಸೈಂಟ್ ಜೋಸೆಫ್ ಮೊನೆಸ್ಟರಿ, ಮಡಂತ್ಯಾರ್ ಆಶಾ ದೀಪಾ ಮತ್ತು ಕೋಟೇಶ್ವರದ ಕಾರ್ಮೆಲ್ ಆಶ್ರಮದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಅಂತ್ಯಕ್ರಿಯೆ ಶುಕ್ರವಾರ(ಅ.6) ಮಧ್ಯಾಹ್ನ 3:30ಕ್ಕೆ ಮಂಗಳೂರಿನ ಕಾರ್ಮೆಲ್‌ಹಿಲ್ ನಲ್ಲಿರುವ ಇನ್‌ಫೆಂಟ್ ಜೀಸಸ್ ಶ್ರೈನ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸುದೀರ್ಘ ಅವಧಿಯಲ್ಲಿ ಮೈಸೂರು ಪುಷ್ಪಾಶ್ರಮ, ಮಂಗಳೂರಿನ ಸೈಂಟ್ ಜೋಸೆಫ್ ಮಾನಸ್ಟ್ರಿ, ಮಡಂತ್ಯಾರಿನ ಆಶಾ ದೀಪ, ಕೋಟೇಶ್ವರದ ಕ್ಯಾರ್ಮೆಲ್ ಆಶ್ರಮದಲ್ಲಿ ಸೇವೆ ಸಲ್ಲಿಸಿದ್ದಾರೆ.
©2021 Tulunada Surya | Developed by CuriousLabs