Saturday, October 5, 2024
spot_img
More

    Latest Posts

    ಕರಾವಳಿಯಲ್ಲಿ ‌ಮತ್ತೆ ಧರ್ಮದಂಗಲ್| ಮಂಗಳಾದೇವಿ ಜಾತ್ರೆಗೆ ಹಿಂದೂ ಧರ್ಮೀಯರಿಗಷ್ಟೇ ವ್ಯಾಪಾರಕ್ಕೆ ಅವಕಾಶ

     ಧರ್ಮದಂಗಲ್ ಮತ್ತೆ ಕರಾವಳಿಯಲ್ಲಿ ಪ್ರಾರಂಭವಾಗುವ ಸಾದ್ಯತೆ ಕಾಣಿಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಇದೀಗ ಮಂಗಳಾದೇವಿ ಯಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ಸದ್ಯ ನವರಾತ್ರಿ ಸಿದ್ದತೆ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಜಾಗ ಹಂಚಿಕೆಯಾಗಿದೆ. ಧರ್ಮದಂಗಲ್ ಮತ್ತೆ ಕರಾವಳಿಯಲ್ಲಿ ಪ್ರಾರಂಭವಾಗುವ ಸಾದ್ಯತೆ ಕಾಣಿಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಇದೀಗ ಮಂಗಳಾದೇವಿ ಯಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ಸದ್ಯ ನವರಾತ್ರಿ ಸಿದ್ದತೆ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಜಾಗ ಹಂಚಿಕೆಯಾಗಿದೆ.

    ಅದರಂತೆ ಇದೀಗ ಸಂಘದವರ ಮನವಿ ಗೆ ಸ್ಪಂದಿಸಿ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದಿಂದಲೇ ಪ್ರತಿ ಸ್ಟಾಲ್ ಗಳನ್ನು ಎಲಂ ಹರಾಜು ನಡೆಸಿದೆ. ಈ ಆದೇಶ ವನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್ ಮುಖಂಡ ಶರಣ್ ಪಂಪ್ ವೆಲ್ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡು ಸಂತೆ ವ್ಯಾಪಾರವನ್ನು ಹಿಂದೂ ಜಾತ್ರಾ ವ್ಯಾಪಾರಸ್ಥ ಸಂಘದವರ ಮೂಲಕ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಕೊಡಬೇಕಾಗಿ ವಿನಂತಿಸಿದ್ದಾರೆ.

    ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದ್ದು, ಈ ವೇಳೆ ದೇವಸ್ಥಾನದ ರಥಬೀದಿಯಲ್ಲಿ ಅಂಗಡಿಗಳನ್ನು ಇಡಲು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಹಿಂದೂ ವ್ಯಾಪಾರಸ್ಥರ ಮನವಿಯಂತೆ ದೇವಸ್ಥಾನದ ಆಡಳಿತ ಮಂಡಳಿ ಹರಾಜು ಪ್ರಕ್ರಿಯೆ ನಡೆಸಿರುವುದನ್ನು ವಿಶ್ವಹಿಂದೂ ಪರಿಷತ್ ಸ್ವಾಗತಿಸಿದೆ.

    ಈ ನಡುವೆ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧಿಸಿರುವ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಜಿಲ್ಲಾಧಿಕಾರಿಗೆ ದೂರು ನೀಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss