ಮಂಗಳೂರು: ರೈಲು ಹಳಿ ತಪಾಸಣೆ ನಡೆಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಟ್ರ್ಯಾಕ್‌ಮನ್ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಆಂಧ್ರಪ್ರದೇಶದ ನವೀನ್ (26) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಂದ್ಯೋಡು ಮುಟ್ಟಂನಿಂದ ಶಿರಿಯ ತನಕ ರೈಲ್ವೇ ಹಳಿ ತಪಾಸಣೆ ಕಾರ್ಯ ನವೀನ್‌ಗೆ ವಹಿಸಲಾಗಿತ್ತು. ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನೈ ಸೂಪರ್ ಫಾಸ್ಟ್ ರೈಲು ಡಿಕ್ಕಿಯಾಗಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
©2021 Tulunada Surya | Developed by CuriousLabs