Sunday, July 21, 2024
spot_img
More

    Latest Posts

    ಮಂಗಳೂರು: ಹಿರಿಯ ನೃತ್ಯ ಗುರು ಪ್ರೇಮನಾಥ್ ಮಾಸ್ಟರ್‌ ನಿಧನ..!

    ಮಂಗಳೂರು: ಹಿರಿಯ ನೃತ್ಯ ಗುರು, ನಿವೃತ್ತ ಶಿಕ್ಷಕ, ಮಂಗಳೂರಿನ ಲಲಿತ ಕಲಾ ಸದನ ಸಂಸ್ಥೆಯ ಸ್ಥಾಪಕ ಬಿ.ಪ್ರೇಮನಾಥ್ ಮಾಸ್ಟರ್  (87) ಅವರು ಅ. 1 ರಂದು ಕೋಡಿಕಲ್‌ ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

    ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರಿನ ಸೈಂಟ್‌ ಎಲೋಶಿಯಸ್‌ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, 1961 ರಲ್ಲಿ ಲಲಿತ ಕಲಾ ಸದನವನ್ನು ಸ್ಥಾಪಿಸಿದ್ದರು. ಮಾಸ್ಟರ್ ವಿಠಲ್‌, ಶ್ಯಾಡೋ ಗೋಪಿನಾಥ್‌, ಅಭಿನಯ ಶಿರೋಮಣಿ ಗುರು ರಾಜರತ್ನಂ ಪಿಳ್ಳೆ ಅವರ ಬಳಿ ನೃತ್ಯ ಅಭ್ಯಾಸ ಮಾಡಿದ್ದರು. ಕಥಕ್ಕಳಿ ಮತ್ತು ಭರತ ನಾಟ್ಯದ ಜತೆಗೆ ಸಂಗೀತ, ಮೃದಂಗ ವಾದನವನ್ನೂ ಕಲಿತಿದ್ದರು.

    ಅವರಿಗೆ ದೇಶ ವಿದೇಶಗಳಲ್ಲಿ ಅನೇಕ ಶಿಷ್ಯಂದಿರು ಇದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ನೃತ್ಯ ಕಲಾ ವಿದ್ಯಾನಿಧಿ, ನೃತ್ಯ ಕಲಾ ಪ್ರಭಾಕರ, ನೃತ್ಯ ಕಲಾ ಸಾಗರ, ದೆಹಲಿ ಕರ್ನಾಟಕ ಸಂಘದ ‘ನೊಬೆಲ್‌ ಮ್ಯಾನ್ ಅವಾರ್ಡ್’ ಮತ್ತಿತರ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ನಿಧನಕ್ಕೆ ಕರಾವಳಿ ನೃತ್ಯ ಕಲಾ ಪರಿಷತ್‌ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss