Wednesday, February 21, 2024
spot_img
More

  Latest Posts

  ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್​ ಪೊಲೀಸ್ ಪೇದೆ ಅನುಮಾನಾಸ್ಪದವಾಗಿ ಸಾವು

  ಬಳ್ಳಾರಿ: ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್​ ಪೊಲೀಸ್ ಪೇದೆ ಜಾಫರ್ ಸಾಹೀಬ್ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ನಿನ್ನೆ(ಮಾ.22) ರಾತ್ರಿ ಪೊಲೀಸ್ ವಸತಿ ಗೃಹದಲ್ಲಿ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾಫರ್​ನನ್ನು ವಿಮ್ಸ್​ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೇದೆ‌ ಜಾಫರ್ ಮೃತಪಟ್ಟಿದ್ದಾನೆ. ಇತನನ್ನ ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

  ಇನ್ನು 2009ರಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದ ಜಾಫರ್, ಎರಡು ಮದುವೆಯಾಗಿದ್ದ ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಎರಡನೇ ಹೆಂಡತಿ ಹಿಂದೂ ಮಹಿಳೆಯಾಗಿದ್ದಾಳಂತೆ. ಮೊದಲನೆ ಹೆಂಡತಿಯನ್ನು ತವರು ಮನೆಯಲ್ಲಿಯೇ ಬಿಟ್ಟಿರುವ ಜಾಫರ್, ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಮಧ್ಯೆ ಜಗಳ ನಡೆದಿದೆಯಂತೆ. ಈ ಹಿನ್ನಲೆಯಲ್ಲಿ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss