Saturday, October 5, 2024
spot_img
More

    Latest Posts

    ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ ಮಹಿಳೆ

    ಪುತ್ತೂರು: ಮಹಿಳೆಯೊಬ್ಬರು ಗಿರಾಕಿ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಚೈನು ಎಗರಿಸಿದ ಘಟನೆ ನಡೆದಿದೆ.

    ಸೋಮವಾರ ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ಗೆ ಬುರ್ಖಾ ಧರಿಸಿ ಸಣ್ಣ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾರೆ.

    ಗಿರಾಕಿಯಂತೆ ಬಂದ ಮಹಿಳೆ 8 ಗ್ರಾಂ, 4ಗ್ರಾಂ ನ ಚೈನು(ಸರ) ಬೇಕೆಂದು ಬೇರೆ ಬೇರೆ ಡಿಸೈನ್ ನ ಸರಗಳನ್ನು ನೋಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಮಗುವಿಗೆ ಎದೆ ಹಾಲು ಕೊಡಲು ಶುರು ಮಾಡಿದೆ. ಈ ವೇಳೆ ಕೌಂಟರ್ ನಲ್ಲಿದ್ದ ಇಬ್ಬರು ಸೇಲ್ಸ್ ಹುಡುಗರ ಪೈಕಿ ಓರ್ವ ಈಚೆ ಬಂದಿದ್ದು ಮತ್ತೋರ್ವ ಅಲ್ಲಿಯೇ ನಿಂತಿದ್ದ. ಬುರ್ಕಾದೊಳಗಡೆ ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆ ಬ್ರಾಸ್ಕೆಟ್ ತೋರಿಸುವಂತೆ ಕೌಂಟರ್ ನಲ್ಲಿದ್ದ ಹುಡುಗನನ್ನು ಕೇಳಿದ್ದಾಳೆ. ಸೇಲ್ಸ್ ಮ್ಯಾನ್ ಹುಡುಗ ಶೋಕೇಸ್ ನಿಂದ ಬ್ರಾಸ್ಕೆಟ್ ತೆಗೆಯಲು ತಿರುಗುವ ವೇಳೆ ಕೌಂಟರ್ ಶೋಕೇಸ್ ನ ಮೇಲೆ ಇಟ್ಟಿದ್ದ ಚೈನುಗಳ ಟ್ರೇಯಿಂದ ಒಂದು ಚೈನನ್ನು ಮಹಿಳೆ ಎಗರಿಸಿದ್ದು, ಬ್ರೌಸ್ ಒಳಗಡೆ ಹಾಕಿ ಅಲ್ಲಿಂದ ತಕ್ಷಣ ಜಾಗ ಖಾಲಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚೈನ್ ಕಳವಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ನಗರದಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ನಗರದ ಇತರೆಡೆಗಳಲ್ಲಿ ಇರುವ ಸಿಸಿಟಿವಿಯಲ್ಲಿ ಮಗುವನ್ನು ಎತ್ತಿಕೊಂಡು ಹೋಗುವ ಮಹಿಳೆಯ ದೃಶ್ಯ ಸೆರೆಯಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss