ವಿಟ್ಲ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನ ಮಂಜೇಶ್ವರದ ಉಪ್ಪಳದಲ್ಲಿ ನಡೆಸಿದೆ. ಬಂಧಿತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಜಂಶೀರ್ @ ಜಂಸೀದ್ @ ಜೆಮ್ಮಿ (27) ಎಂದು ಗುರುತಿಸಲಾಗಿದೆ. ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನಂತರ ಹಾಜರಾಗದೇ ತಲೆಮರೆಸಿಕೊಂಡು ವಾರೆಂಟ್ ಜಾರಿಯಾಗಿದ್ದು, ಆತನನ್ನು ವಿಟ್ಲ ಠಾಣಾ ASI ಜಯರಾಮ ಮತ್ತು ಸಿಬ್ಬಂದಿಯವರಾದ ಸಿಪಿಸಿ ವಿಶ್ವನಾಥ, ಸಿಪಿಸಿ ಯಂಕಪ್ಪ ಹಾಗೂ ಸಿಪಿಸಿ ಅಶೋಕ ಎಂಬವರುಗಳು ಕಾಸರಗೋಡಿನ ಮಂಜೇಶ್ವರದ ಉಪ್ಪಳದಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ನೀಡಿದೆ.
©2021 Tulunada Surya | Developed by CuriousLabs