ಮಂಗಳೂರು: ಮುಸ್ಲಿಂ ಸ್ಪೀಕರ್ಗೆ ಬಿಜೆಪಿ ಶಾಸಕರು ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಸ್ಪೀಕರ್ ಯು.ಟಿ .ಖಾದರ್ ಪ್ರತಿಕ್ರಿಯಿಸಿ, ನಾನು ಎಲ್ಲರ ಸ್ಪೀಕರ್. ಈ ಸ್ಥಾನವನ್ನು ಯಾವುದೇ ರಾಜಕೀಯ ಜಾತಿ ಧರ್ಮದ ಆಧಾರದಲ್ಲಿ ನೋಡುವಂತಿಲ್ಲ. ಇದು ಎಲ್ಲವನ್ನೂ ಮೆಟ್ಟಿ ಮೇಲೆ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ. ಎಲ್ಲರೂ ಗೌರವ ಕೊಡುವುದು ನನಗಲ್ಲ. ಸಂವಿಧಾನ ಪೀಠಕ್ಕೆ, ಸಭಾಧ್ಯಕ್ಷ ಸ್ಥಾನಕ್ಕೆ ಎಂದರು. ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳುವವರು ಸ್ಥಾನದ ಗೌರವ ಉಳಿಸಬೇಕು. ಜಮೀರ್ ಅವರ ಹೇಳಿಕೆಗೆ ನಾನು ಯಾವುದೇ ಕಮೆಂಟ್ ಮಾಡುದಿಲ್ಲ. ಜಾತಿಯ ಆಧಾರದಲ್ಲಿ ನನ್ನನ್ನು ಪೀಠದಲ್ಲಿ ಕುಳಿತುಕೊಳ್ಳಲಿಲ್ಲ. ಅರ್ಹತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಸ್ಪೀಕರ್ ಸ್ಥಾನವನ್ನು ನೀಡಿದ್ದಾರೆ. ಎಲ್ಲರಿಗೆ ಗೌರವ ನೀಡಿ ಸರ್ವರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಆದ್ದರಿಂದ ಸ್ಪೀಕರ್ ಸ್ಥಾನವನ್ನು ಪಕ್ಷ ಮೀರಿ ನೋಡಲು ಬಯಸುತ್ತೇನೆ ಎಂದು ಯು.ಟಿ.ಖಾದರ್ ಹೇಳಿದರು.
©2021 Tulunada Surya | Developed by CuriousLabs