Sunday, September 15, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರದ ನೂತನ ಅಧ್ಯಕ್ಷರಾದ ಶರಣ್ ರಾಜ್ ಕೆ.ಆರ್ ರವರ ಪದಗ್ರಹಣ ಮತ್ತು ಪತ್ರಿಕಾಗೋಷ್ಠಿ

    ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ತುಳುನಾಡಿನ ಏಕೈಕ ಸಂಘಟನೆ ಶ್ರೀ ಯೋಗೀಶ್
    ಶೆಟ್ಟಿ ಜಪ್ಪು ಸಾರಥ್ಯದ ತುಳುನಾಡ ರಕ್ಷಣಾ ವೇದಿಕೆ (ರಿ) ಇದರ ಮಂಗಳೂರು ನಗರ ಘಟಕದ ನೂತನ
    ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ತುಳು ಚಲನಚಿತ್ರ ನಿರ್ಮಾಪಕ ಹಾಗೂ ಸಮಾಜ
    ಸೇವಕರಾಗಿರುವ ಶ್ರೀ ಶರಣ್ ರಾಜ್ ಕೆ. ಆರ್. ಇವರ ಪದಗ್ರಹಣ ಕಾರ್ಯಕ್ರಮವು ದಿನಾಂಕ
    30-09-2023 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಹಾಗೂ ಪತ್ರಿಕಾಗೋಷ್ಠಿಯು ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೇಲ್‌ನಲ್ಲಿರುವ ಸಭಾ ಮಂದಿರದಲ್ಲಿ ನೆರವೇರಿತು.


    ತು.ರ.ವೇ.ಯ ಸ್ಥಾಪಕಧ್ಯಾಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಇತರ ಪದಾಧಿಕಾರಿಗಳ ಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಕಳೆದ 15 ವರ್ಷಗಳಿಂದ ತುಳುನಾಡಿನ ನೆಲ, ಜಲ, ಆಚಾರ, ವಿಚಾರ, ಸಂಸ್ಕೃತಿ, ಭಾಷೆ ಸಂಬಂಧಿಸಿದಂತೆ ಜನಜಾಗೃತಿ, ವಿಚಾರಸಂಕಿರಣ, ಅಭಿವೃದ್ಧಿ ಮತ್ತು ಐಕ್ಯತೆ ಸಹಿತ ಹತ್ತು ಹಲವು ಕಾರ್ಯಕ್ರಮಗಳ ನಡೆಸುತ್ತಾ ತು.ರ.ವೇ. ಜನರ ಪ್ರೀತಿಗೆ ಪಾತ್ರವಾಗಿದೆ. ದೇಶ, ವಿದೇಶಿಗಳಲ್ಲಿ ಹಲವಾರು ಘಟಕಗಳನ್ನು ಹೊಂದಿ ಸಾವಿರಾರು ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಹೊಂದಿದೆ.


    ರಕ್ತದಾನ ಶಿಬಿರ, ಜಪ್ಪು ಮಹಾಕಾಳಿ ಪಡ್ಪು ಪ್ರದೇಶದಲ್ಲಿ ಅಂಡರ್‌ಪಾಸ್ ನಿರ್ಮಿಸಲು ಹೋರಾಟ,
    ಮಂಗಳೂರಿನಲ್ಲಿ 3 ದಿನಗಳ ವಿಶ್ವ ತುಳು ಸಮ್ಮೇಳನ ಆಯೋಜನೆ, 1837 ರ ತುಳುನಾಡ ಸ್ವಾತಂತ್ರ್ಯ
    ಸಂಗ್ರಾಮದಲ್ಲಿ ಹುತಾತ್ಮರಾದ ಸಮರ ಸೇನಾನಿಗಳನ್ನು ನೆನಪಿಸುವ ಸಲುವಾಗಿ ಸತತ 12 ವರ್ಷಗಳಿಂದ
    ಮಂಗಳೂರಿನ ಬಾವುಟಗುಡ್ಡೆಯಲ್ಲಿ ತುಳು ಧ್ವಜಾರೋಹಣ, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ
    ಸತತ 62 ದಿನಗಳ ಕಾಲ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ
    ನಿರ್ಗತಿಕರಿಗೆ ಅನ್ನದಾನದಂತಹ ನೂರಾರು ಕಾರ್ಯಕ್ರಮಗಳ ಮೂಲಕ ತುಳುನಾಡ ರಕ್ಷಣಾ ವೇದಿಕೆಯು
    ಜನರ ನಾಡಿಮಿಡಿತವಾಗಿದೆ.


    ಕಾಸರಗೋಡಿನ ಕೆ.ಪಿ. ರಾಜಶೇಖರ ಹಾಗೂ ಶ್ರೀಮತಿ ಅನಿತ ಇವರ ಮಗನಾಗಿರುವ ಎಂ.ಬಿ.ಎ.
    ಪದವೀಧರರು ಆದ ಮಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಉದ್ಯಮ ಹೊಂದಿರುವ ಶ್ರೀಯುತ ಶರಣ್ ರಾಜ್
    ಕೆ.ಆರ್. ರವರು ವರ್ಲ್ಡ್ ಹ್ಯೂಮನ್ ರೈಟ್ಸ್ ಕಮಿಷನ್ ಸಂಸ್ಥೆಯು ನೀಡುವ ಗೌರವ ಡಾಕ್ಟರೇಟ್
    ಪಡೆದಿರುತ್ತಾರೆ. ತುಳು ಚಿತ್ರ ಬೋಜರಾಜ್ ಎಂ.ಬಿ.ಎಸ್.ಗೆ ಸಹ ನಿರ್ಮಾಪಕ ಆಗಿರುತ್ತಾರೆ.
    ತುಳುನಾಡ ರಕ್ಷಣಾ ವೇದಿಕೆಯು ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ

    ೧. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಎರಡನೇ ಭಾಷೆಯಾಗಿ ಘೋಷಿಸುವುದು.
    ೨. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು.
    ೩. ಮಂಗಳೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
    ೪. ತುಳು ಅಭಿವೃದ್ಧಿ ಪ್ರಾಧಿಕಾರ ರಚನೆ
    ೫. ಕಚೇರಿ, ಕೋರ್ಟುಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ
    ೬. ಮಂಗಳೂರಿನಲ್ಲಿ ಪ್ರತ್ಯೇಕ ಹೈಕೋರ್ಟು ಪೀಠ ಸ್ಥಾಪನೆ
    ೭. ತುಳುನಾಡಿನ ಜಾತಿ, ಮತ, ಭಾಷಾ ಸಾಮರಸ್ಯಕ್ಕೆ ಒತ್ತು ಕೊಡುವುದು
    ೮. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಸ್ಥಳಗಳಿಗೆ ಈಗ ಚಾಲ್ತಿಯಲ್ಲಿರುವ ಹೆಸರನ್ನು ಬದಲಾಯಿಸಿ
    ಸ್ಥಳಗಳಿಗೆ ಮೂಲ ತುಳು ಹೆಸರನ್ನು ಇಡಬೇಕು.
    ೯. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಲ್ ಹಾಗೂ ಪ್ರಮುಖ ಮಾರ್ಗಗಳಿಗೆ ತುಳುನಾಡಿನ
    ಮಹಾಪುರುಷರ ಹೆಸರನ್ನು ಇಡಬೇಕು.
    ೧೦. ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಗಳಲ್ಲಿ ಸ್ಥಳೀಯರಿಗೆ ಮೊದಲು ಉದ್ಯೋಗ ನೀಡಬೇಕು.
    ೧೧. ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ತುಳು ನಾಮಫಲಕ ಅಳವಡಿಸಬೇಕು.
    ೧೨. ಮಂಗಳೂರನ್ನು ಕೇಂದ್ರಿಕರಿಸಿ ಪ್ರತ್ಯೇಕ ರೈಲ್ವೇ ವಲಯ ರಚನೆ
    ೧೩. ತುಳುನಾಡಿಗೆ ಪ್ರತ್ಯೇಕವಾದ ಪ್ರವಾಸೋದ್ಯಮ ನಿಗಮ
    ೧೪. ಬಿಡುಗಡೆಯಾಗುವ ಎಲ್ಲಾ ತುಳು ಚಲನಚಿತ್ರಗಳಿಗೆ ಸಬ್ಸಿಡಿ ನೀಡುವುದು
    ೧೫. ತುಳುನಾಡಿನ ಬ್ಯಾಂಕ್, ಪೊಲೀಸ್ ಇತರ ಸರಕಾರಿ ಕಚೇರಿಗಳಲ್ಲಿ, ಕೈಗಾರಿಕೋದ್ಯಮದಲ್ಲಿ ಸ್ಥಳೀಯರಿಗೆ
    ಉದ್ಯೋಗ ನೀಡಬೇಕೆಂಬ ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು
    ಇದೀಗ ಮಂಗಳೂರು ನಗರ ಘಟಕದ ವತಿಯಿಂದ ಈ ಬೇಡಿಕೆಗಳ ಈಡೇರಿಕೆಗಾಗಿ ಇನ್ನಷ್ಟು
    ಶ್ರಮಿಸುವುದಾಗಿ ನೂತನ ಅಧ್ಯಕ್ಷರಾದ ಶರಣ್ ರಾಜ್ ಕೆ. ಆರ್. ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕೇಂದ್ರಿಯ ಮಂಡಳಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ ಕಿರಣ್ ಬಡ್ಲೇಗುತ್ತು ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಇಬ್ರಾಹಿಂ ಜಪ್ಪು ಪ್ರಶಾಂತ್ ಭಟ್ ಕಡಬ, ಕೃಷ್ಣಕುಮಾರ್ , ಶೋಭಾ ಪಾಂಗಳ ಜ್ಯೋತಿಕಾ ಜೈನ್, ಅನುಸೂಯ ಶೆಟ್ಟಿ ,ರಮೇಶ್ ಪೂಜಾರಿ , ಕ್ಲೀಟಸ್ ಲೋಬೊ, ಮುನೀರ್ ಮುಕ್ಕಚೇರಿ , ಜೋಸೆಫ್ ಲೋಬೊ, ನಾಗಲಕ್ಷ್ಮಿ , ಇಸ್ಮಾಯಿಲ್ ಮುಡೂಶೆಡ್ಡೆ , ಉಸ್ಮನ್ ಅಕ್ಷಾ , ಅಜೀಜ್ ಉಳ್ಳಾಲ್ , ಫಾರೂಕ್ ಗೋಲ್ಡನ್ , ರಾಘವೇಂದ್ರ , ಶೋನ್ ಡಿಸೋಜ, ಶಾರದ ಶೆಟ್ಟಿ , ತನ್ವೀರ್ , ಗುಣವತಿ , ಗೈಟನ್ , ಪ್ರಮೋದ್ ,ಅಶೋಕ್ ಉಳ್ಳಾಲ್ , ಇರ್ಪನ್ ಕಲ್ಲಾಪ್ , ಮಹೇಶ್ ಕಾಮಕ್ಷಿ , ಗುಲಾಬಿ , ಸಾದನಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss