Wednesday, October 23, 2024
spot_img
More

    Latest Posts

    ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್! ಸ್ತ್ರೀ ಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ, ಸಿಎಂ ಮಹತ್ವದ ಹೇಳಿಕೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೋಲಾರ ಸೇರಿ ಕೆಲವು ಭಾಗಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಮುಂದಿನ ವರ್ಷ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಬುಧವಾರ ಸಚಿವ ಸಂಪುಟ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ ನಿಮ್ಮ ಸ್ತ್ರಿ ಶಕ್ತಿ ಸಾಲದ ಮನ್ನಾ  ಮಾಡ್ತೀನಿ ಎಂದುರಾಜ್ಯದ  ಸ್ತ್ರೀ ಸಂಘದ ಮಹಿಳೆಯರಿಗೆ ಸಿದ್ದರಾಮಯ್ಯ ಅವರು ಭರವಸೆಯನ್ನು ನೀಡಿದರು. ಸ್ತ್ರೀ ಸಂಘದ ಮಹಿಳೆಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಾಲಮನ್ನಾ ಬಗ್ಗೆ ಮನವಿ ಸಲ್ಇಸಿದ್ದರು. ನಾನು ಭರವಸೆ ಕೊಟ್ಟಿರೋದು ನಿಜ. ಆದರೆ, ಮುಂದಿನ ವರ್ಷ ಇದರ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಭರವಸೆ ನೀಡಿ ಕಳುಹಿಸಿದರು.

    ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾಕ್ಕೆ 2,400 ಕೋಟಿ ಬೇಕು:  ಇನ್ನು ರಾಜ್ಯಾದ್ಯಂತ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾಗೆ 2,400 ಕೋಟಿ ಬೇಕಾಗುತ್ತದೆ.  ಹೀಗಾಗಿ ಈ ವರ್ಷ ಆಗೋದಿಲ್ಲ ಮುಂದಿನ ವರ್ಷ ಮಾಡ್ತೀನಿ ಎಂದು ಸಿದ್ದರಾಮಯ್ಯ ಮಹಿಳೆಯರುಗೆ ಭರಸವೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಯರು ಇಂದು ಅಥಾವ ನಾಳೆ ಸಂಘದ ಮಹಿಳೆಯರ ಜೊತೆ ಚರ್ಚೆ ಮಾಡಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಸಾಲ ವಸೂಲಿಗೆ ಬಂದವರ ಬೈಕ್‌ ಸುಟ್ಟು ಹಾಕಿದ ಮಹಿಳೆಯರು

      ಕೋಲಾರ: ಸಾಮಾನ್ಯವಾಗಿ ಮಹಿಳಾ ಸ್ತ್ರೀ ಸಂಘಗಳಿಗೆ ಬ್ಯಾಂಕ್‌ಗಳು ಸಾಲ ಕೊಡುವುದು ಹಾಗೂ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಆದರೆ, ಕೋಲಾರದಲ್ಲಿ ಮಹಿಳಾ ಸಂಘಕ್ಕೆ ಸಾಲ ಕೊಟ್ಟಿದ್ದನ್ನು ವಸೂಲಿ ಮಾಡಲು ಬಂದ ಡಿಸಿಸಿ ಬ್ಯಾಂಕ್‌ ಸಿಬ್ಬಂದಿಯ ಬೈಕ್‌ನ್ನು ಮಹಿಳೆಯರು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಳೆದ ವಾರ (ಜೂ.22ರಂದು) ನಡೆದಿತ್ತು. ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿ ವಿಚಾರವಾಗಿ, ಸಾಲ ವಸೂಲಿ ಮಾಡಲು ಹೋದ ಸಿಬ್ಬಂದಿಯ ಬೈಕ್‌ಗೆ ಮಹಿಳೆಯರು ಬೆಂಕಿ ಹಚ್ಚಿದ್ದರು.  ಮುಳಬಾಗಿಲು ತಾಲ್ಲೂಕಿನ ಬಿಸ್ನಹಳ್ಳಿ ಗ್ರಾಮದಲ್ಲಿ‌ ಘಟನೆ ನಡೆದಿದೆ. ಸ್ತ್ರೀ‌ಶಕ್ತಿ ಸಂಘದ ಮಹಿಳೆಯರು ಕೋಲಾರ ಜಿಲ್ಲೆಯ ಗೋಕುಂಟೆ ಸೊಸೈಟಿಯಲ್ಲಿ‌ ಸಾಲ ಪಡೆದಿದ್ದರು. ಸೊಸೈಟಿ ಸಿಬ್ಬಂದಿ ಜೋಸೆಪ್ ಎನ್ನುವವರು ಸಾಲ ವಸೂಲಿಗೆ ಗಾಮಕ್ಕೆ‌ ತೆರಳಿದಾಗ, ಮಹಿಳೆಯರಿಂದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು, ಜೊತೆಗೆ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

    ಸಾಲ ವಸೂಲಿಗೆ ಬಂದಿದ್ದ ಸಹಕಾರಿ ಸಂಘದ ಸಿಇಓ ಅಧಿಕಾರಿಯನ್ನೇ ಗ್ರಾಮದಿಂದ ಹೊರಕ್ಕೆ ಹಾಕಿದ ಸ್ತ್ರೀಶಕ್ತಿ ಸಂಘ!

    ಸಿದ್ದರಾಮಯ್ಯ ಮಹಿಳಾ ಸಂಘದ ಸಾಲ ಮನ್ನಾ ಮಾಡಲಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಮಹಿಳೆಯರ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಈ ಮೂಲಕ ಮಹಿಳಾ ಸಂಘದ ಸಾಲವನ್ನು ಮನ್ನಾ ಮಾಡಬೇಕು. ಕೋಲಾರದಲ್ಲಿ ದಿನದಿಂದ ದಿನಕ್ಕೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ವಿಚಾರ ಹೆಚ್ಚಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಿ ತೀವ್ರ ವಿಕೋಪದ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಮುಂದಿನ ವರ್ಷ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ಮಹಿಳೆಯರಿಗೆ ಸಂತಸದ ಸುದ್ದಿಯಾಗಿದೆ. 

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss