Monday, July 22, 2024
spot_img
More

    Latest Posts

    Mangaluru ಜಪ್ಪು: ಕೆಳಸೇತುವೆ ನಿರ್ಮಾಣ ‌ಕಾಮಗಾರಿ, ಕಾಂಕ್ರೀಟ್‌ ಸ್ಲ್ಯಾಬ್ ಕುಸಿದು ನಾಲ್ವರಿಗೆ ಗಾಯ

    ಮಂಗಳೂರು: ಜಪ್ಪು ಮಹಾಕಾಳಿಪಡ್ಪುವಿನಲ್ಲಿ ಸ್ಮಾರ್ಟಿ ಸಿಟಿ ಯೋಜನೆಯಡಿ ರೈಲ್ವೇ ಇಲಾಖೆಯಿಂದ ನಡೆಯುತ್ತಿರುವ ಬಾಕ್ಸ್‌ ಪುಶ್ಶಿಂಗ್‌ ಅಂಡರ್‌ ಪಾಸ್‌ ಕಾಮಗಾರಿಯ ಬಾಕ್ಸ್‌ ನಿರ್ಮಾಣದ ವೇಳೆ ಕಾಂಕ್ರೀಟ್‌ ಸ್ಲ್ಯಾಬ್ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.


    ಕಳೆದ 13 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಮತ್ತು ಸ್ಥಳೀಯರ ನಿರಂತರ ಹೋರಾಟ ಫಲವಾಗಿ ಸರಕಾರ ಕಳೆದ 2022 ನವೆಂಬರ್ ತಿಂಗಳಿನಿಂದ ರೈಲು ಗೇಟ್ ರೋಡ್ ಬಂದ್ ಮಾಡಿ ಕೆಳಸೇತುವೆ ಕಾಮಗಾರಿ ನಡೆಸುತ್ತಿದೆ. ಕಳೆದ ಒಂದು ವರ್ಷದಿಂದ ತೊಕ್ಕೊಟು, ದೇರಳಕಟ್ಟೆ ಕಾಸರಗೋಡುನಿಂದ ಮಂಗಳೂರು ನಗರಕ್ಕೆ ಆಗಮಿಸಲು ಮಹಾಕಾಳಿ ಪಡ್ಪುವಿನಿಂದ ಬರಲು ಅಸಾಧ್ಯವಾದರಿಂದ ಪ್ರಯಾಣಿಕರು, ವಾಹನಗಳು ಪಂಪ್ವೆಲ್ ಮೂಲಕ ನಗರ ಸೇರುತ್ತಿದೆ. ಈಗಾಗಲೇ ರೈಲು ಗೇಟ್ ರಸ್ತೆಯು ಮುಚ್ಚಿರುವುದರಿಂದ ತೊಂದರೆಗಳನ್ನು ಅನುಭವಿಸುತ್ತಿರುವ ಜನರು ಈ ಅವಘಡ ದಿಂದಾಗಿ ಕಾಮಗಾರಿಯು ಇನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಗುತ್ತಿಗೆದಾರರ ನಿರ್ಲಕ್ಷ್ಯ ಬಗ್ಗೆ ಸಮಗ್ರ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಆಗ್ರಹಿಸಿದ್ದಾರೆ.


    ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರುವಿನಿಂದ ಮಹಾಕಾಳಿಪಡ್ಪು ಸಂಪರ್ಕದ ಚತುಷ್ಪಥ ರಸ್ತೆ ಕಾಮಗಾರಿ ಸ್ಮಾರ್ಟ್‌ ಸಿಟಿ ವತಿಯಿದ ನಡೆಯುತ್ತಿದೆ. ಈ ಮಧ್ಯೆ ಬಾಕಿ ಉಳಿದಿರುವ ರೈಲ್ವೇ ಅಂಡರ್‌ಪಾಸ್‌ನ ಕಾಮಗಾರಿಯು “ಬಾಕ್ಸ್‌ ಪುಶ್ಶಿಂಗ್‌’ ವಿಧಾನದ ಮೂಲಕ ರೈಲ್ವೇ ಇಲಾಖೆ ನಡೆಸುತ್ತಿದೆ. ಕೆಲವು ತಿಂಗಳಿನಿಂದ ಈ ಕಾಮಗಾರಿ ಚಾಲನೆಯಲ್ಲಿದೆ.

    ಸೋಮವಾರ ಸಂಜೆ ಬಾಕ್ಸ್‌ ಒಂದರ ಸ್ಲ್ಯಾಬ್ ಗೆ ಕಾಂಕ್ರೀಟ್‌ ಹಾಕುತ್ತಿದ್ದಾಗ ಸ್ಲ್ಯಾಬ್ ಕುಸಿದಿದೆ. ಈ ವೇಳೆ ಸುಮಾರು 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. 11ನೇ ಲೋಡ್‌ ಕಾಂಕ್ರೀಟ್‌ ಹಾಕುತ್ತಿದ್ದಾಗ ಘಟನೆ ನಡೆದಿದೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಅಂಡರ್‌ಪಾಸ್‌ಗಾಗಿ ಬಾಕ್ಸ್‌ಗಳ ನಿರ್ಮಾಣ ಕಾಮಗಾರಿಯನ್ನು ಮುಂಬೈ ಮೂಲದ ನಿರ್ಮಾಣ ಸಂಸ್ಥೆಯೊಂದು ಗುತ್ತಿಗೆ ವಹಿಸಿಕೊಂಡಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss