ಜಪ್ಪು ಮಹಾಕಾಳಿಪಡ್ಪು ಪೌರಕಾರ್ಮಿಕರ ವಸತಿ ನಿಲಯದ ಹಳೆ ಕಟ್ಟಡ ಶಿಥಿಲ ಅವಸ್ಥೆಯಲ್ಲಿದ್ದು ಅಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ನಡುವೆ ರಾತೋ ರಾತ್ರಿ ಅಧಿಕಾರಿಗಳು ಬ್ಯಾನರ್ ಅಳವಡಿಸಿ ಅಲ್ಲಿರುವ ಪೌರಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದಾರೆ.

ಮಾಹಾಕಳಿ ಪಡ್ಪುವಿನ ಶಿಥಿಲ ಅವಸ್ಥೆಯಲ್ಲಿ ಇರುವ ಕಟ್ಟಡದಲ್ಲಿನ ಕೆಲವು ಕುಟುಂಬಗಳು ಪೌರಕಾರ್ಮಿಕ ವೃತ್ತಿಯಿಂದ ನಿವೃತ್ತರಾಗಿದ್ದವರು. ಈ ಹಿಂದೆ ಕಟ್ಟಡದಲ್ಲಿ ಬಹಳಷ್ಟು ಕುಟುಂಬಗಳು ವಾಸವಾಗಿದ್ದರು. ಕೆಲವು ಪೌರಕಾರ್ಮಿಕ ಕುಟುಂಬಗಳನ್ನು ಹೊಸದಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ನಿವೃತ್ತರಾದ ಕುಟುಂಬದ ಸಹಿತ ಕೆಲ ಪೌರಕಾರ್ಮಿಕರ ಕುಟುಂಬ ಹಳೆ ಕಟ್ಟಡದಲ್ಲಿ ವಾಸವಾಗಿದ್ದಾರೆ. ಶುಕ್ರವಾರ ರಾತ್ರಿ ಪಾಲಿಕೆಯು ಕಟ್ಟಡದಲ್ಲಿ ಬ್ಯಾನರ್ ಅಳವಡಿಸಿದ್ದು ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ವಾಸ್ತವ್ಯಕ್ಕೆ ಯೋಗ್ಯವಲ್ಲ ಯಾರು ಕೂಡ ಈ ಕಟ್ಟಡದ ಒಳಗಡೆ ಅಥವಾ ಸುತ್ತ ಓಡಾಡದಂತೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಎಂದು ಬ್ಯಾನರ್ ಹಾಕಲಾಗಿದೆ.

ತನ್ನ ಜೀವನಪೂರ್ತಿ ಪೌರ ಕಾರ್ಮಿಕರಾಗಿ ನಗರ ಸ್ವಚ್ಛತೆಗಾಗಿ ಪರಿಶ್ರಮ ವಹಿಸಿದ ಕುಟುಂಬಗಳನ್ನು ಏಕಾಏಕಿ ಖಾಲಿ ಮಾಡಲು ಹೇಳುವುದು ಸರಿಯಲ್ಲ ಈ ಬಗ್ಗೆ ಹಲವು ಬಾರಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಹೋರಾಟಗಳನ್ನ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಗ್ರಹಿಸಿತ್ತು. ಅಂದು ನಿರ್ಲಕ್ಷ್ಯ ವಹಿಸಿದ ಮಹಾನಗರ ಪಾಲಿಕೆ ಹಾಗೂ ಸರಕಾರದ ನೀತಿಯಿಂದ ಪೌರಕಾರ್ಮಿಕ ಕುಟುಂಬವು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಮಹಾಕಾಳಿಪಡ್ಪು ಪರಿಸರದಿಂದ ದೂರದ ಸ್ಥಳಕ್ಕೆ ಹೋಗುವಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದುದರಿಂದ ಪೌರಕಾರ್ಮಿಕ ಕುಟುಂಬಗಳಿಗೆ ಮಾನಸಿಕವಾಗಿ ನೋವು ಮಾಡದೇ ಉತ್ತಮ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು
ಒತ್ತಾಯಿಸಿದ್ದಾರೆ.